ಫುಟ್ಬಾಲ್ ವಿಶ್ವಕಪ್ ನಲ್ಲಿ ಅರ್ಜೆಂಟಿನಾ ಸೋತದ್ದಕ್ಕೆ ಬೇಸರ: ಮನೆಬಿಟ್ಟು ತೆರಳಿದ ಕೇರಳದ ಯುವಕ

Update: 2018-06-22 15:09 GMT

ಕೊಟ್ಟಾಯಂ, ಜೂ.22: ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಕ್ರೋಷಿಯಾ ವಿರುದ್ಧ ಅರ್ಜೆಂಟಿನಾ ಸೋಲನುಭವಿಸಿದ ಬೇಸರದಲ್ಲಿ ಕೇರಳದ ಯುವಕನೊಬ್ಬ ಮನೆ ಬಿಟ್ಟು ತೆರಳಿರುವುದಾಗಿ ವರದಿಯಾಗಿದೆ.

ಅರ್ಜೆಂಟಿನಾದ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿಯವರ ಅಭಿಮಾನಿಯಾಗಿರುವ 30 ವರ್ಷದ ದಿನು ಅಲೆಕ್ಸ್ ಇಂದು ಬೆಳಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಆತ ಫುಟ್ಬಾಲ್ ಪಂದ್ಯ ವೀಕ್ಷಿಸಿದ್ದ ಎಂದು ಪೋಷಕರು ತಿಳಿಸಿದ್ದು, ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

"ನನಗೆ ಈ ಜಗತ್ತಿನಲ್ಲಿ ಏನೂ ಉಳಿದಿಲ್ಲ. ನಾನು ಆಳಕ್ಕಿಳಿಯುತ್ತಿದ್ದೇನೆ" ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಹಾಗು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಯುವಕನಿಗಾಗಿ ಹುಡುಕಾಟ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News