ಉಡುಪಿ: ಗುರುವಾರದ ರೈತ ಸಂತೆಗಾಗಿ ನೊಂದಣಿ
ಉಡುಪಿ, ಜೂ.22: ಶಿವಳ್ಳಿ ತೋಟಗಾರಿಕಾ ಕ್ಷೇತ್ರ ದೊಡ್ಡಣಗುಡ್ಡೆ ಇಲ್ಲಿನ ರೈತ ಸೇವಾ ಕೇಂದ್ರದಲ್ಲಿ ಪ್ರತಿ ಗುರುವಾರ ರೈತರ ಸಂತೆ ನಡೆಯಲಿದ್ದು, ರೈತರು ಹಾಗೂ ಯಾವುದೇ ರೈತ ಸಂಘಸಂಸ್ಥೆಗಳು ‘ರೈತರ ಸಂತೆ’ಯಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತರು ನೊಂದಣಿ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ (ದೂರವಾಣಿ:0820-2522837), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಕಳ (ದೂರವಾಣಿ: 08258- 230288), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕುಂದಾಪುರ (ದೂರವಾಣಿ:08254-230813), ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ (ದೂರವಾಣಿ:0820-2520590) ಇಲ್ಲಿ ಜೂ.25ರಿಂದ ಜುಲೈ 31ರವರೆಗೆ ಪಡೆದು ತಮ್ಮ ಪೋಟೋ, ಆಧಾರ್ ಕಾರ್ಡ್, ಪಹಣಿ ಯೊಂದಿಗೆ ಸಲ್ಲಿಸಬಹುದಾಗಿದೆ.
ರೈತರ ಸಂತೆ ಪ್ರಾರಂಭಿಸುವ ದಿನವನ್ನು ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.