×
Ad

ತಲಪಾಡಿ ಟೋಲ್ ಸಂಗ್ರಹ ಕೇಂದ್ರದಲ್ಲಿ ಕಿರುಕುಳ: ಡಿವೈಎಫ್‍ಐನಿಂದ ಪ್ರತಿಭಟನೆಯ ಎಚ್ಚರಿಕೆ

Update: 2018-06-22 21:27 IST

ತಲಪಾಡಿ, ಜೂ. 22: ಇಲ್ಲಿನ ತಲಪಾಡಿ ನವಯುಗ ಟೋಲ್ ಸಂಗ್ರಹ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಹಾಗೂ ಅಲ್ಲಿ ಬೀಡುಬಿಟ್ಟಿರುವ ಬಾಡಿಗೆ ಗೂಂಡಾಗಳು ವಾಹನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದು ಈ ಹಿಂದೆ ಸ್ಥಳೀಯ ನಡೆದ ಒಪ್ಪಂದವನ್ನು ಉಲ್ಲಂಘಿಸಿ ಈಗ ಸ್ಥಳೀಯ ನಿವಾಸಿಗಳಿಂದ ಆಧಾರ್ ಕಾರ್ಡ್ , ವೋಟರ್ ಕಾರ್ಡ್ , ಅಥವಾ ಡ್ರೈವಿಂಗ್ ಲೈಸೆನ್ಸ್ ಬದಲಾಗಿ ವಾಹನದ ಆರ್.ಸಿ ತೋರಿಸುವಂತೆ ಒತ್ತಾಯಿಸುತ್ತಿದ್ದು ಇದರಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಸ್ನೇಹಿತರ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿರುವ ವಾಹನಗಳನ್ನು ಚಲಾಯಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನವಯುಗ ಕಂಪೆನಿ ಈ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿದ ನೀತಿ ನಿಯಮಗಳಿಗೆ ವಿರುಧ್ಧವಾಗಿ ಈ ರೀತಿಯ ಹೊಸ ಕಾನೂನನ್ನು ಇಲ್ಲಿನ ಸ್ಥಳೀಯ ನಿವಾಸಿಗಳ ಮೇಲೆ ಹೇರುತ್ತಿದ್ದು ಈ ನಿಯಮವನ್ನು ಕೂಡಲೇ ರದ್ದುಗೊಳಿಸಬೇಕು . ಇಲ್ಲದೇ ಇದ್ದಲ್ಲಿ ಡಿವೈಎಫ್‍ಐ ಸಂಘಟನೆ ಸ್ಥಳೀಯ ನಿವಾಸಿಗಳ  ಜೊತೆ ಸೇರಿ ಟೋಲ್‍ಗೇಟ್ ವಿರುದ್ಧ ಹೋರಾಟ ನಡೆಸಲಿದೆ ಎಂದು ಉಳ್ಳಾಲ ವಲಯ ಡಿವೈಎಫ್‍ಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News