ಪಕ್ಷಾಧ್ಯಕ್ಷ ಹುದ್ದೆಗೆ ಮುಶರ್ರಫ್ ರಾಜೀನಾಮೆ

Update: 2018-06-22 16:02 GMT

ಇಸ್ಲಾಮಾಬಾದ್, ಜೂ. 22: ಆಲ್ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎಪಿಎಂಎಲ್)ನ ಅಧ್ಯಕ್ಷತೆಗೆ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಮುಶರ್ರಫ್ ತನ್ನ ರಾಜೀನಾಮೆ ಪತ್ರವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ ಎಂದು ಪಕ್ಷದ ನೂತನ ಅಧ್ಯಕ್ಷ ಮುಹಮ್ಮದ್ ಅಮ್ಜಾದ್ ಹೇಳಿದರು.

ವಿದೇಶದಿಂದ ಪಕ್ಷವನ್ನು ನಡೆಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮುಶರ್ರಫ್ ರಾಜೀನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News