ಕಮಲ್ ಹಾಸನ್‌ರ ಮಕ್ಕಳ್ ನೀಧಿ ಮಯಮ್ ರಾಜಕೀಯ ಪಕ್ಷವಾಗಿ ನೋಂದಣಿ

Update: 2018-06-23 15:34 GMT

ಹೊಸದಿಲ್ಲಿ, ಜೂ.23: ನಟ-ರಾಜಕಾರಣಿ ಕಮಲ್ ಹಾಸನ್ ಸ್ಥಾಪಿಸಿರುವ ನೂತನ ಪಕ್ಷ ಮಕ್ಕಳ್ ನೀಧಿ ಮಯಮ್ (ಎಂನ್‌ಎಂ) ಅನ್ನು ಶನಿವಾರದಂದು ಚುನಾವಣಾ ಆಯೋಗವು ರಾಜಕೀಯ ಪಕ್ಷವಾಗಿ ನೋಂದಾಯಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿದ ನೋಂದಾವಣಿ ದಾಖಲೆಗಳು ಮುಂದಿನ ವಾರ ಪಕ್ಷದ ಪ್ರಮುಖರ ಕೈಸೇರಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಕಮಲ್ ಹಾಸನ್ ನೀಡಿರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಅವರ ಪಕ್ಷವನ್ನು ನೋಂದಾಯಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮಯಮ್ (ಜನರ ನ್ಯಾಯ ಕೇಂದ್ರ) ಗೆ ಚಾಲನೆ ನೀಡಿದ್ದರು. ಪಕ್ಷದ ಧ್ವಜದಲ್ಲಿ ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಆರು ಕೈಗಳು ಪರಸ್ಪರ ಹಿಡಿದುಕೊಂಡಿರುವ ಚಿತ್ರವಿದೆ. ಈ ಪೈಕಿ ಮೂರು ಕೈಗಳು ಕೆಂಪು ಬಣ್ಣದಲ್ಲಿದ್ದರೆ ಉಳಿದ ಮೂರು ಕೈಗಳು ಬಿಳಿ ಬಣ್ಣದಲ್ಲಿವೆ.  ಈ ಕೈಗಳ ಮಧ್ಯದಲ್ಲಿ ನಕ್ಷತ್ರದ ಚಿತ್ರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News