×
Ad

ಮಂಗಳೂರಿನ ದಿಯಾ ರವಿಕುಮಾರ್ ಆಯ್ಕೆ

Update: 2018-06-23 21:40 IST

ಮಂಗಳೂರು, ಜೂ. 23: ಮಂಗಳೂರಿನ ವಿದ್ಯಾರ್ಥಿನಿ ದಿಯಾ ರವಿ ಕುಮಾರ್ ಪ್ರೀ-ಟೀನ್ ಆಫ್‌ ದಿ ಇಯರ್ (2018) ಜಾಗತಿಕ ಸ್ಫರ್ಧೆಗೆ ಭಾರತದ ಕರ್ನಾಟಕದ ಪ್ರತಿನಿಧಿಯಾಗಿ ಅಯ್ಕೆಗೊಂಡಿದ್ದಾರೆ.

ಥೈಲ್ಯಾಂಡ್‌ನ ಬ್ಯಾಂಕಾಂಕ್‌ನಲ್ಲಿ ಜುಲೈ 6ರಂದು ನಡೆಯಲಿರುವ ಇಂಟರ್‌ನ್ಯಾಷನಲ್ ಮಿಸ್ ಪ್ರೀ-ಟೀನ್ ಏಷ್ಯಾ ಫೆಸಿಪಿಕ್ ಪ್ರೀನ್ಸ್ ಆ್ಯಂಡ್ ಪ್ರಿನ್ಸೆಸ್ 2018ರ ಅಂತಿಮ ಸುತ್ತಿನ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಮಂಗಳೂರಿನ ಯೆನೆಪೊಯ ಸ್ಕೂಲ್‌ನ 9ನೆ ಗ್ರೇಡ್‌ನ ವಿದ್ಯಾರ್ಥಿನಿ ದೀಯಾ ರವಿಕುಮಾರ್ ಅಂತಾರಾಷ್ಟೀಯ ಮಟ್ಟದ  ಮಕ್ಕಳ ಸಾಂಸ್ಕೃತಿಕ ವಿನಿಮಯ ಮತ್ತು ಮಕ್ಕಳ ಅಂತಾರಾಷ್ಟ್ರೀಯ ಮಟ್ಟದ ಸುಪ್ತ ಪ್ರತಿಭೆಗಳ ಪ್ರತಿಭಾ ಪ್ರದರ್ಶನದ ವೈಭವದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇಂಟರ್‌ನ್ಯಾಷನಲ್ ಮಿಸ್ ಪ್ರೀ-ಟೀನ್ ಏಷ್ಯಾ ಫೆಸಿಪಿಕ್ ಪ್ರೀನ್ಸ್ ಆ್ಯಂಡ್ ಪ್ರಿನ್ಸೆಸ್ 2018ರ ಕಾರ್ಯಕ್ರಮದ ಸಂಘಟಕರ ಮೂಲಕ ದೇಶದ ಪ್ರತಿನಿಧಿಯಾಗಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ದೀಯಾ ರವಿ ಕುಮಾರ್ ಜೂನ್ 27ರಿಂದ ಜುಲೈ 7ರವರೆಗೆ 12ದಿನಗಳ ಕಾಲ ಥೈಲ್ಯಾಂಡಿನ ಬ್ಯಾಂಕಾಂಕ್‌ನಲ್ಲಿ ಮಕ್ಕಳ ಸಾಂಸ್ಕೃತಿಕ ವಿನಿಮಯ, ತರಬೇತಿ, ಜಾಗತಿಕ ವೇದಿಕೆಯಲ್ಲಿ ಮಕ್ಕಳ ನಡುವಿನ ಬಾಂಧವ್ಯ ವೃದ್ಧಿಯ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೂನ್ 25ರಂದು ಬ್ಯಾಂಕಾಂಕ್‌ಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News