ನ್ಯೂ ಬೀ- ಅಲ್ ಮದೀನ ಇಸ್ಲಾಮಿಕ್ ಪ್ರಿ-ಸ್ಕೂಲ್ ಶುಭಾರಂಭ
ನರಿಂಗಾನ, ಜೂ. 23: ಸಾಂಪ್ರದಾಯಿಕ ಶಿಕ್ಷಣ ಪದ್ದತಿಗಿಂತ ಭಿನ್ನವಾದ , ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಪೂರಕವಾದ ಅಂತಾರಾಷ್ಟ್ರೀಯ ಮಟ್ಟದ ಮನಶಾಸ್ತ್ರ ತಜ್ಞರು ರೂಪಿಸಿದ ವಿನೂತನ ಮಾದರಿಯ ಹಾಗೂ ಆಕರ್ಷಕ ಬೋಧನಾ ಪದ್ಧತಿಯನ್ನೊಳಗೊಂಡ ನ್ಯೂ ಬೀ ಅಲ್ ಮದೀನ ಇಸ್ಲಾಮಿಕ್ ಪಿ-ಸ್ಕ್ರೂಲ್’ ಇಂದು ಅಲ್ ಮದೀನದಲ್ಲಿ ಶುಭಾರಂಭಗೊಂಡಿತು.
ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ ಮದೀನ ಪ್ರ.ಕಾರ್ಯದರ್ಶಿ ಸಯ್ಯಿದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಉಜಿರೆ ದುಆ ನೆರವೇರಿಸಿದರು.
ನ್ಯೂ ಬೀ ಸ್ಕೂಲ್ ನೆಟ್ ವರ್ಕ್‌ನ ನಿರ್ದೇಶಕರಾದ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಉದ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ, ಅಲ್ ಮದೀನ ಬೆಂಗಳೂರು ಸಮಿತಿ ಅಧ್ಯಕ್ಷರಾದ ಮುಹಮ್ಮದ್ ತಸ್ಲೀಲ್, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಹಾಜಿ ಎನ್.ಎಸ್. ಕರೀಂ, ಅಲ್ ಮದೀನ ಮಲಾರ್ ಕಮಿಟಿ ಗೌರವಾಧ್ಯಕ್ಷ ಹಾಜಿ ಪಾರೂಕ್ ಅಬ್ಬಾಸ್ ಉಳ್ಳಾಲ, ಅಲ್ ಮದೀನ ಸನಯ್ಯ ಕಮಿಟಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಅಲ್ ಮದೀನ ಕುವೈಟ್ ಕಮಿಟಿಯ ಸದಸ್ಯ ಅಹ್ಮದ್ ಬಾವ, ಹಫರಲ್ ಬಾತಿನ್ ಸಮಿತಿಯ ಅಧ್ಯಕ್ಷ ಬಾವ ಹಾಜಿ ಕುಂಜತ್ತೂರು, ಮುಡಿಪು ಸಂಯುಕ್ತ ಜಮಾತ್ ಅಧ್ಯಕ್ಷ ಎಸ್.ಕೆ.ಖಾದರ್ ಹಾಜಿ ಮುಡಿಪು, ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ಮೋಂಟುಗೋಳಿ, ಮಂಜನಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಂಞಿಬಾವ ಹಾಜಿ ಕಲ್ಕಟ್ಟ, ಪುತ್ತುಬಾವ ಹಾಜಿ ಸಾಂಬಾರ್ ತೋಟ, ಅಲ್ ಮದೀನ ಶಾಲಾ ಸಂಚಾಲಕ ಹಾಜಿ ಅಬ್ದುಲ್ಲ ಮೋರ್ಲ, ಹಾಜಿ ಅಲಿಕುಂಞಿ ಪಾರೆ, ಏಶಿಯನ್ ಬಾವ ಹಾಜಿ ಕಲ್ಲಟ್ಟ, ಶೌಕತ್ ಹಾಜಿ ದೇರಳಕಟ್ಟೆ, ಅಲ್ ಮದೀನ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಇಂಗ್ಲಿಷ್ ಟ್ರೈನರ್ ಮನ್ಸೂರ್ ಹಿಮಮಿ, ಮುಹಮ್ಮದ್ ಕುಂಞಿ ಅಮ್ಜದಿ, ಬಾವ ಹಾಜಿ ಪಂಜಲ, ಟಿ.ಎಂ. ಇಸ್ಮಾಯಿಲ್ ಮೊಂಟೆಪದವು, ಇಲ್ಯಾಸ್ ಪೊಟ್ಟೊಳಿಕೆ, ಮುಹಮ್ಮದ್ ಕಂಡಿಕ, ಮೊಯ್ದಿನ್ ಮಲಾರ್, ಅಬ್ಬಾಸ್ ಸಖಾಫಿ ಕೊಡಂಚಿಲ್, ಕೆ.ಎಂ.ಕೆ. ಮಂಜನಾಡಿ, ಹನೀಫ್ ಮಾಸ್ಟರ್, ಹಾರಿಸ್ ಮಾಸ್ಟರ್, ಮುಹಮ್ಮದ್ ಮಾಸ್ಟರ್ ಉಪಸ್ಥಿತರಿದ್ದರು.
ಅಬ್ದುಲ್ ರಝಾಕ್ ಮಾಸ್ಟರ್ ವಂದಿಸಿದರು.