ಉಡುಪಿ: ಜೂ. 25ರಿಂದ 'ಟುವರ್ಡ್ಸ್ ಐಡಿಯಲ್ ವಿಮೆನ್' ಕಾರ್ಯಾಗಾರ

Update: 2018-06-23 17:35 GMT

ಉಡುಪಿ, ಜೂ. 23: ಉಡುಪಿಯಲ್ಲಿ ಮುಸ್ಲಿಂ ಯುವತಿಯರಿಗಾಗಿ 'ಟುವರ್ಡ್ಸ್ ಐಡಿಯಲ್ ವಿಮೆನ್' ಎಂಬ ಆರು ದಿನಗಳ ಕಾರ್ಯಾಗಾರ ನಡೆಯಲಿದೆ. 

ಜೂ. 25ರಿಂದ 30ರವರೆಗೆ ಉಡುಪಿಯ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ ನಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಮುಸ್ಲಿಂ ಯುವತಿಯರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.

ಈ ಕಾರ್ಯಾಗಾರದಲ್ಲಿ  ಅಂತಾರಾಷ್ಟ್ರೀಯ ಖ್ಯಾತಿಯ ಹಲವು ವಾಗ್ಮಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಯಾಸಿನ್ ಮಲ್ಪೆ ಹಾಗೂ ಡಾ. ಅಬ್ದುಲ್ ಅಝೀಝ್ ಮಣಿಪಾಲ ಅವರು ಈ ಕಾರ್ಯಾಗಾರದ ನಿರ್ದೇಶಕರಾಗಿದ್ದಾರೆ.

ಕಾರ್ಯಾಗಾರದಲ್ಲಿ 17 ವರ್ಷಕ್ಕೆ ಮೇಲ್ಪಟ್ಟ ಅವಿವಾಹಿತ ಅಥವಾ ಇತ್ತೀಚಿಗೆ ವಿವಾಹವಾದ  ಮುಸ್ಲಿಂ ಯುವತಿಯರು ಭಾಗವಹಿಸಬಹುದು. ಕಾರ್ಯಾಗಾರ ಇಂಗ್ಲಿಷ್ ಹಾಗೂ ಉರ್ದು ಭಾಷೆಗಳಲ್ಲಿ ನಡೆಯಲಿದೆ.  ಹೆಚ್ಚಿನ ವಿವರಗಳಿಗಾಗಿ ಡಾ. ಜುನೈದ ಸುಲ್ತಾನ 9743579500,  ಮೆಹರುನ್ನಿಸಾ ಮಣಿಪಾಲ 8050806674, ವಾಜಿದ ತಬಸ್ಸುಮ್ 9686178116 ಇವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News