ಜೂ. 24: ಸಚಿವ ಖಾದರ್ ಪ್ರವಾಸ
ಮಂಗಳೂರು, ಜೂ.23: ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಜೂ.24ರಂದು ಬೆಳಗ್ಗೆ 5:40ಕ್ಕೆ ಬೆಂಗಳೂರಿನಿಂದ ವಿಮಾನ ಮೂಲಕ ಹೊರಟು 6:30ಕ್ಕೆ ಮಂಗಳೂರು ತಲುಪಲಿದ್ದಾರೆ. ಬೆಳಗ್ಗೆ 6:45ರಿಂದ 8ರವರೆಗೆ ಮಂಗಳೂರು ಸರ್ಕ್ಯುಟ್ ಹೌಸಿನಲ್ಲಿ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 8ಕ್ಕೆ ಅಮೆರಿಕ ಕನ್ನಡಿಗರ ಒಕ್ಕೂಟಗಳ ಆಗರ (ಅಕ್ಕ) ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ವಠಾರದಲ್ಲಿ ನಡೆಯುವ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಸೈಕಲ್ ಮ್ಯಾರಥಾನ್‌ನ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 8:30ಕ್ಕೆ ದೇರಳಕಟ್ಟೆಯ ಪನೀರ್ ಚರ್ಚ್‌ನಲ್ಲಿ ಅಭಿನಂದನಾ ಸಮಾರಂಭ, ನಂತರ ವಿವಿಧ ಖಾಸಗಿ ಕಾರ್ಯಕ್ರಮಗಳು, ಮಧ್ಯಾಹ್ನ 3ಕ್ಕೆ ಬಂಟ್ವಾಳ ವಲಯ ಸಮಿತಿ ಕೆಥೋಲಿಕ್ ಸಭಾ ವತಿಯಿಂದ ಮೊಡಂಕಾಪು ಅನುಗ್ರಹ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಕೇರಳದ ತಳಿಪ್ಪರಂಬಕ್ಕೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.