ನೂತನ ತಾಂತ್ರಿಕತೆಯ ಅಳವಡಿಕೆಯೊಂದಿಗೆ ರೈತರ ಸಶಕ್ತೀಕರಣಕ್ಕೆ ಪ್ರೋತ್ಸಾಹ ನೀಡಬೇಕು: ಮಹಾಬಲೇಶ್ವರ ಎಂ.ಎಸ್‌

Update: 2018-06-23 17:25 GMT

ಮಂಗಳೂರು, ಜೂ.23: ನೂತನ ತಾಂತ್ರಿಕ ತೆಯ ಮೂಲಕ ರೈತರ ಸಶಕ್ತೀಕರಣಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

ಅವರು ಇಂದು ನಗರದಲ್ಲಿ ಕೃಷಿ ಉದ್ಯಮಶೀಲ ಸಮಾವೇಶದ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದ್ದಾರೆ. ಆಧುನಿಕ ಕೃಷಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಬ್ಯಾಂಕ್‌ಗಳು ಅವರಿಗೆ ನೆರವು ನೀಡಬೇಕಾಗಿದೆ. ಕೃಷಿ ಉದ್ಯಮಶೀಲತೆಯ ವ್ಯವಸ್ಥಾಪಕರು ಈ ನಿಟ್ಟಿನಲ್ಲಿ ರೈತರೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಮಾರುಕಟ್ಟೆ ಸ್ಥಿತಿಗತಿ ,ಬೆಳೆಯ ಸ್ಥಿತಿಗತಿಗಳ ಬಗ್ಗೆ ಮಾರ್ಗದರ್ಶನ ನೀಡಬೇಕಾಗಿದೆ. ಕೃಷಿಯಲ್ಲಿ ತಾಂತ್ರಿಕತೆಯ ಬಳಕೆಯ ಮಾಡುವ ಬಗ್ಗೆ ನಿರ್ವಹಣೆಯ ಬಗ್ಗೆ ಮನವರಿಕೆ ಮಾಡಿ ಅವರಲ್ಲಿ ಧೈರ್ಯ ತುಂಬ ಬೇಕಾಗಿದೆ ಎಂದು ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

ಕೇಂದ್ರ ಸರಕಾರ 2020ರ ವೇಳೆಗೆ ರೈತರ ಬೆಳೆ ದ್ವಿಗುಣಗೊಳಿಸುವ ಚಿಂತನೆ ಹೊಂದಿದೆ.ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಆರ್ಥಿಕ ಸಹಾಯ ನೀಡಲು ಸಾಕಷ್ಟು ಅವಕಾಶಗಳಿವೆ.ಈ ಬಾರಿ ಸಕಾಲದಲ್ಲಿ ಮಳೆ ಆರಂಭವಾಗಿದೆ.ಈ ಹಿನ್ನೆಲೆಯಲ್ಲಿ 2018-19ರಲ್ಲಿ ಬ್ಯಾಂಕ್ 9000ಕೋಟಿ ಕೃಷಿ ಸಾಲ ನೀಡುವ ಗುರಿ ತಲುಪುವ ನೀರೀಕ್ಷೆ ಹೊಂದಿರುವುದಾಗಿ ಕರ್ಣಾಟಕ ಬ್ಯಾಂಕ್ ಎಂ.ಡಿ ತಿಳಿಸಿದ್ದಾರೆ.ಅಲ್ಲದೆ ನೀರಾವರಿ, ಯಾಂತ್ರಿಕೃತ ಕೃಷಿ,ಕೃಷಿ ಸಾಲಕ್ಕಾಗಿ ಚಿನ್ನಾ ಅಡಮಾನ. ಬೆಳೆ ಸಾಲ, ಅಭಿವೃದ್ಧಿ ಸಾಲ ಹಾಗೂ ಕೃಷಿ ವಸ್ತುಗಳ ಸಂಗ್ರಹ ಮತ್ತು ಸಂಸ್ಕರಣೆ ಸಾಲ ನೀಡಲು ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಬ್ಯಾಂಕಿನ ಸಿಒಒ ರಾಘವೇಂದ್ರ ಭಟ್.ಎಂ,ಜನರಲ್ ಮ್ಯಾನೇಜರ್ ಗಳಾದ ಮುರಳೀಧರ ಕೃಷ್ಣ ರಾವ್, ನಾಗರಾಜ ರಾವ್.ಬಿ, ಗೋಕುಲ್‌ ದಾಸ್‌ಪೈ, ಮಂಜುನಾಥ್ ಭಟ್ ಬಿ.ಕೆ, ಮಹಾಲಿಂಗೇಶ್ವರ ಕೆ ಮೊದಲಾದವರು ಉಪಸ್ಥಿತರಿದ್ದರು.

ಜನರಲ್ ಮ್ಯಾನೇಜರ್ ಬಾಲಚಂದ್ರ ವೈ.ವಿ ಸ್ವಾಗತಿಸಿದರು.ಸಹಾಯಕ ಜನರಲ್ ಮ್ಯಾನೇಜರ್ ಗಿರೀಶ್ ಎಂ.ಆರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News