ಈಜಿಪ್ಟ್ ಸೂಪರ್ ಸ್ಟಾರ್ ಮುಹಮ್ಮದ್ ಸಲಾಹ್ ಗೆ ಚೆಚೆನ್ ಗೌರವ ನಾಗರಿಕತ್ವ

Update: 2018-06-23 18:44 GMT

ಚೆಚೆನ್ಯಾ, ಜೂ. 23: ಈಜಿಪ್ಟ್ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಮುಹಮ್ಮದ್ ಸಲಾಹ್ ಅವರಿಗೆ ಚೆಚೆನ್ಯಾದ ಗೌರವ ನಾಗರಿಕತ್ವ ನೀಡಲಾಗಿದೆ. 

ಚೆಚೆನ್ಯಾ ನಾಯಕ ರಮಝಾನ್ ಕಾದಿರೋವ್ ಅವರು ಮುಹಮ್ಮದ್ ಸಲಾಹ್ ಅವರಿಗೆ ಈ ಗೌರವವನ್ನು ಪ್ರದಾನಿಸಿದರು.

ಫಿಫಾ ವಿಶ್ವ ಕಪ್ ನಿಂದ ಈಗಾಗಲೇ ಹೊರಬಿದ್ದಿರುವ ಈಜಿಪ್ಟ್ ತಂಡಕ್ಕೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೆಚೆನ್ ನಾಯಕ ರಮಝಾನ್ ಕಾದಿರೋವ್ ಅವರು ಚೆಚೆನ್ ದೇಶದ ಧ್ವಜದ ಸಂಕೇತವಿರುವ ಬ್ಯಾಜ್ ಅನ್ನು ಮುಹಮ್ಮದ್ ಸಲಾಹ್ ಅವರ ಅಂಗಿಗೆ ಪಿನ್ ಮಾಡುವ ಮೂಲಕ ತಮ್ಮ ದೇಶದ ಗೌರವ ನಾಗರಿಕತ್ವವನ್ನು ನೀಡಿದರು.

ಬಳಿಕ ಅವರಿಗೆ ಬೆಳ್ಳಿಯ ತಟ್ಟೆ ಹಾಗು ಚೆಚೆನ್ ಫುಟ್ಬಾಲ್ ತಂಡ ಎಫ್ ಸಿ ಅಹ್ಮದ್ ಗ್ರೋಝ್ನಿಯ ಸಹಿ ಹಾಕಿದ ಶರ್ಟ್ ಪ್ರದಾನ ಮಾಡಲಾಯಿತು.

ಈಜಿಪ್ಟ್ ರಾಷ್ಟ್ರೀಯ ತಂಡ ಹಾಗು ಲಿವರ್ ಪೂಲ್ ಫುಟ್ಬಾಲ್ ಕ್ಲಬ್ ಸದಸ್ಯ ಮುಹಮ್ಮದ್ ಸಲಾಹ್ ಲಿವರ್ ಪೂಲ್ ಪರ ಹಲವು ಗೋಲು ಗಳಿಸಿದ ಬಳಿಕ ಜಾಗತಿಕ ಖ್ಯಾತಿಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News