×
Ad

37ನೇ ಸ್ವಚ್ಛತಾ ಶ್ರಮದಾನ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ

Update: 2018-06-24 17:52 IST

ಮಂಗಳೂರು, ಜೂ.24: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 37ನೇ ಶ್ರಮದಾನವನ್ನು ಬಿಕರ್ನಕಟ್ಟೆ ಮೇಲ್ಸೆತುವೆಯ ಕೆಳಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಅಭಿಯಾನಕ್ಕೆ ಪ್ರೊ.ಕಾಶಿ ರಘೋತ್ತಮ ರಾವ್, ಬೆಂಗಳೂರಿನ ಮನಸ್ ತರಬೇತಿ ಸಂಸ್ಥೆ ನಿರ್ದೇಶಕ ಹಾಗೂ ಎನ್ನಾರೈ ವಿಭಾ ಪ್ರಭು ಜಂಟಿಯಾಗಿ ಚಾಲನೆ ನೀಡಿದರು. ಜಿತಕಾಮಾನಂದ ಶ್ರೀ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಳಿನಿ ಭಟ್, ರವಿಶಂಕರ್ ಕೆ.ಕೆ., ಪ್ರೊ.ಸತೀಶ್ ಭಟ್, ಪ್ರಶಾಂತ ಯಕ್ಕೂರು, ಅಶೋಕ ಸುಬ್ಬಯ್ಯ ಮತ್ತಿತರರಿದ್ದರು. ಕುಲಶೇಖರ್ ಕೈಕಂಬ ಮೇಲ್ಸೆತುವೆಯ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಪ್ರಥಮದಲ್ಲಿ ಪ್ಲೈಒವರ್ ಕಂಬಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು. ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ, ಮುಖೇಶ್ ಆಳ್ವ ಹಾಗೂ ಮೆಹಬೂಬ್ ಖಾನ್ ನೇತೃತ್ವದಲ್ಲಿ ಮೂರು ತಂಡಗಳು ಕಂಬಗಳಿಗೆ ಅಂಟಿಸಿದ್ದ ಪೋಸ್ಟರ್‌ಗಳನ್ನು ಕಿತ್ತು ತೆಗೆದರು. ನಂತರ ನೀರು ಹಾಕಿ ಸ್ವಚ್ಛಗೊಳಿಸಿದರು.

ಜೊತೆಗೆ ತಂಡವೊಂದು ಸುತ್ತಮುತ್ತಲಿನ ಪರಿಸರದಲ್ಲಿದ್ದ ಕಲ್ಲು, ಮಣ್ಣು ಹಾಗೂ ಅಲ್ಲಲ್ಲಿ ಬಿದ್ದಿದ್ದ ಗಾಜಿನ ಬಾಟಲ್ ತೆಗೆದು ಶುಚಿಗೊಳಿಸಿತು. ಮತ್ತೊಂದು ಗುಂಪು ಪಡೀಲ್ ಸಾಗುವ ಹೆದ್ದಾರಿಯ ಬಳಿಯ ತೋಡುಗಳಲ್ಲಿ ತುಂಬಿದ್ದ ತ್ಯಾಜ್ಯ ತೆಗೆದು ಸ್ವಚ್ಛ ಮಾಡಿತು.

ನಂತರ ಪ್ಲೈ ಓವರ್ ಕೆಳಭಾಗದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ತಾತ್ಕಾಲಿಕ ಆಸನಗಳನ್ನು ತೆರವುಗೊಳಿಸಿ, ಗುಣಮಟ್ಟದ ಆಸನಗಳನ್ನು ಹಾಕಿ ಪ್ರಯಾಣಿಕರಿಗೆ ಹಾಗೂ ಆಟೊ ಚಾಲಕರಿಗೆ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಹಿರಿಯರ ಸಂಘದ ಪದಾಧಿಕಾರಿಗಳಾದ ಪಿ.ಜಿ. ಶೆಣೈ, ಕೆ.ಜಯರಾಜ್ ರೈ, ಕೆ.ರಮೇಶ್ ರಾವ್, ಪೀಟರ್ ಒಸ್ವಲ್ಡ್ ರೋಡ್ರಿಗಸ್ ಹಾಗೂ ನಾಗೇಶ್ ಕೆ., ಪ್ರವೀಣ ಶೆಟ್ಟಿ, ಪಿ.ಎನ್. ಭಟ್, ಅನಿರುದ್ಧ ನಾಯಕ್, ಶಿವರಾಜ್ ವಾಮಂಜೂರು, ಸಾಕ್ಷಿತ ಎಂ. ಸುವರ್ಣ, ಕನಕರಾಯ, ಸೌರಜ್ ಮಂಗಳೂರು, ಚೇತನಾ ಗಡಿಯಾರ್, ಧನುಷ್ ಶೆಟ್ಟಿ ಸೇರಿದಂತೆ ಅನೇಕ ಹಿರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಅಭಿಯಾನದ ಉಸ್ತುವಾರಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News