×
Ad

ಉಡುಪಿ: ಕಾಂಗ್ರೆಸ್ ಸೇವಾದಳದಿಂದ ಧ್ವಜ ವಂದನ ಕಾರ್ಯಕ್ರಮ

Update: 2018-06-24 20:35 IST

ಉಡುಪಿ, ಜೂ. 24: ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂರವರ ತತ್ವಗಳು ಹಾಗೂ ಜಾತ್ಯಾತೀತ ಮನೋಭಾವವನ್ನು ಇಂದಿನ ಯುವಕರಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆದೇಶ ದಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ರವಿವಾರ ಧ್ವಜ ವಂದನ ಕಾರ್ಯಕ್ರಮವನ್ನು ಉಡುಪಿಯ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಧ್ವಜ ವಂದನೆ ನೆರವೇರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಬಿಜೆಪಿ ಇತ್ತೀಚಿನ ದಿನಗಳಲ್ಲಿ ತಮ್ಮ ವಿವಿಧ ಸಂಘಟನೆಗಳ ಮೂಲಕ ಜಾತಿ ಹಾಗೂ ಧರ್ಮವನ್ನು ವಿಭಜಿಸಿ ಮತ ಗಳಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಬಹುತ್ವದ ಆಧಾರದಲ್ಲಿ ರಾಷ್ಟೀಯ ಭಾವೈಕತೆಯ ಮೂಲಕ ಜಾಗೃತಗೊಳಿಸುವ ಚಿಂನೆ ಮಾಡುತ್ತಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಸೇವಾದಳದ ಅಧ್ಯಕ್ಷ ಅಶೋಕ್ ಕುಮರ್ ಕೊಡವೂರು ಮಾತನಾಡಿ, ಕಾಂಗ್ರೆಸ್ ಸೇವಾದಳ ಘಟಕಕ್ಕೆ ನೂತನ ಸಮವಸ್ತ್ರ ನೀಡುವ ಯೋಜನೆಯೊಂದಿಗೆ ಕಾಯಕಲ್ಪ ನೀಡಲಾಗುವುದು. ಪ್ರತಿ ತಿಂಗಳ ಕೊನೆಯ ರವಿವಾರ ಜಿಲ್ಲೆಯ ವಿವಿಧ ಬ್ಲಾಕ್‌ಗಳಲ್ಲಿ ಧ್ವಜ ವಂದನ ಕಾರ್ಯಕ್ರಮದೊಂದಿಗೆ ಯುವಕರಲ್ಲಿ ದೇಶಭಿಮಾನ ಮೂಡುವಂತೆ ಮಾಡಲಾಗುವುದು ಮತ್ತು ಜಾತ್ಯತೀತ ಮನೋಭಾವವನ್ನು ಯುವಜನರಲ್ಲಿ ಜಾಗೃತಗೊಳಿಸುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುರಲಿ ಶೆಟ್ಟಿ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರುಮ, ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ, ವಿವಿಧ ಘಟಕಗಳ ಅಧ್ಯಕ್ಷರುಗಳಾದ ಇಸ್ಮಾಯಿಲ್ ಆತ್ರಾಡಿ, ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಗಣೇಶ್ ಕೋಟ್ಯಾನ್, ನಗರಸಭೆ ಅಧ್ಯಕ್ಷೆ ಮಿನಾಕ್ಷಿ ಮಾಧವ ಬನ್ನಂಜೆ, ಮುಖಂಡರುಗಳಾದ ಉದ್ಯಾವರ ನಾಗೇಶ್ ಕುಮಾರ್, ಲಕ್ಷೀಕಾಂತ ಬೊಸ್ಕೂರ್, ಮಹಾಬಲ ಕುಂದರ್, ಸುಮನ ಕಿಶೋರ್, ಪದ್ಮನಾಭ, ಸದಾಶಿವ ಕಟ್ಟೆಗುಡ್ಡೆ, ಮೆಲ್ವಿನ್ ಸಿಕ್ಟೇರಾ, ಸುಧೀರ್, ನಾರಾಯಣ ಕುಂದರ್, ಶಾಂತ ರಾಮ್ ಸಾಲ್ವಾಂಕರ್, ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News