ಎನ್‌ಎಸ್‌ಜಿಯ ‘ಬ್ಲಾಕ್ ಕ್ಯಾಟ್’ ಕಮಾಂಡೋಗಳಾಗಲು ಈಗ ಮನೋವೈಜ್ಞಾನಿಕ ಪರೀಕ್ಷೆಯೂ ಸೇರ್ಪಡೆ

Update: 2018-06-24 15:21 GMT

ಹೊಸದಿಲ್ಲಿ,ಜೂ.24: ಎನ್‌ಎಸ್‌ಜಿಯು ದೇಶದಲ್ಲಿ ವಿಶೇಷ ಭಯೋತ್ಪಾದನೆ ನಿಗ್ರಹ ಮತ್ತು ಅಪಹರಣ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುವ ‘ಬ್ಲಾಕ್ ಕ್ಯಾಟ್’ ಕಮಾಂಡೋಗಳಾಗಲು ಬಯಸುವ ಯೋಧರಿಗೆ ಹೊಸದಾಗಿ ಮನೋವೈಜ್ಞಾನಿಕ ಪರೀಕ್ಷೆಯನ್ನು ಜಾರಿಗೊಳಿಸಿದೆ.

ಪ್ರತಿಷ್ಠಿತ ಪಡೆಯಲ್ಲಿ ಸೇರ್ಪಡೆಗೊಳ್ಳಲು ಮೂರು ತಿಂಗಳ ಅವಧಿಯ ತರಬೇತಿಯನ್ನು ಪಡೆಯುವ ಸೇನೆ ಮತ್ತು ಅರೆ ಮಿಲಿಟರಿ ಪಡೆಗಳ ಯೋಧರಿಗೆ ಈವರೆಗೆ ಕಠಿಣ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.

ಬ್ರಿಟನ್ ಮತ್ತು ಜರ್ಮನಿಗಳ ವಿಶೇಷ ಭಯೋತ್ಪಾದನೆ ನಿಗ್ರಹ ಪಡೆಗಳ ಮಾದರಿಯಲ್ಲಿ ರೂಪಿಸಲಾಗಿರುವ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ ಅಥವಾ ಎನ್‌ಎಸ್‌ಜಿಗೆ ಸೇರಲು ಆಕಾಂಕ್ಷಿ ಯೋಧರೀಗ ಹಾಲಿ ಇರುವ ಪರೀಕ್ಷೆಗಳ ಜೊತೆಗೆ ವಿಶೇಷ ಮನೋವೈಜ್ಞಾನಿಕ ಪರೀಕ್ಷೆಗಳು ಮತ್ತು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಎನ್‌ಎಸ್‌ಜಿಯಲ್ಲಿ ಪೂರ್ಣಕಾಲಿಕ ಮನೋವೈಜ್ಞಾನಿಕರ ತುರ್ತು ಅಗತ್ಯವಿದ್ದು,ಇತ್ತೀಚಿಗೆ ಈ ಕೇತ್ರದಲ್ಲಿಯ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News