ಖಾಸಗಿ ವಿಮಾನಗಳಲ್ಲಿ ಹೆಚ್ಚುವರಿ ಬ್ಯಾಗೇಜ್ ಒಯ್ಯುವ ಮುನ್ನ ಈ ಸುದ್ದಿ ಓದಿ

Update: 2018-06-24 15:32 GMT

ಹೊಸದಿಲ್ಲಿ, ಜೂ.24: ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವಂಥ ಬೆಳವಣಿಗೆಯೊಂದರಲ್ಲಿ ಖಾಸಗಿ ವೈಮಾನಿಕ ಸಂಸ್ಥೆಗಳಾದ ಇಂಡಿಗೊ, ಗೋಏರ್ ಹಾಗೂ ಸ್ಪೈಸ್ ಜೆಟ್, ಪ್ರಯಾಣಿಕರು ಕೊಂಡೊಯ್ಯುವ ಬ್ಯಾಗೇಜ್‌ನ ತೂಕ ನಿಗದಿತ ಹದಿನೈದು ಕೆ.ಜಿ ಗಿಂತ ಹೆಚ್ಚಿದ್ದಲ್ಲಿ ಪ್ರತಿ ಹೆಚ್ಚುವರಿ ಕೆ.ಜಿಗೆ 400 ರೂ. ಹೆಚ್ಚಳಗೊಳಿಸಿದೆ.

ಗೋಏರ್‌ನಲ್ಲಿ ಈ ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬಂದಿದ್ದರೆ ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಶುಕ್ರವಾರದಿಂದಲೇ ಬ್ಯಾಗೇಜ್ ದರವನ್ನು ಹೆಚ್ಚಳಗೊಳಿಸಿದೆ. ಸದ್ಯ ಸರಕಾರಿ ಸ್ವಾಮ್ಯದ ಏರ್ ಇಂಡಿಯದಲ್ಲಿ ಮಾತ್ರ ಪ್ರಯಾಣಿಕರು 25 ಕೆ.ಜಿಯಷ್ಟು ಬ್ಯಾಗೇಜನ್ನು ಕೊಂಡೊಯ್ಯಬಹುದಾಗಿದೆ. ಇತ್ತೀಚೆಗಷ್ಟೇ ಏರುತ್ತಿರುವ ಇಂಧನ ಬೆಲೆಯನ್ನು ಸರಿದೂಗಿಸಲು ದೇಶೀಯ ವಿಮಾನಗಳಲ್ಲಿ 400 ರೂ. ಸರ್ಚಾರ್ಜ್ ಘೋಷಿಸಿದ ಇಂಡಿಗೊ ಇದೀಗ ಬ್ಯಾಗೇಜ್ ಮೇಲೆ ಪ್ರತೀ ಹೆಚ್ಚುವರಿ ಕೆ.ಜಿಗೆ 400 ರೂ. ದರ ಹೆಚ್ಚಳಗೊಳಿಸಿ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಹಾಕಿದೆ. ಪ್ರೀ-ಬುಕಿಂಗ್ ನಡೆಸಿದ ಸಂದರ್ಭದಲ್ಲಿ ಇಂಡಿಗೊ, ಐದು ಕೆ.ಜಿ ಹೆಚ್ಚುವರಿ ಬ್ಯಾಗೇಜ್‌ಗೆ 1,900 ರೂ., 10 ಕೆ.ಜಿಗೆ 3,800 ರೂ., 15 ಕೆ.ಜಿಗೆ 5,700 ರೂ. ಹಾಗೂ 30 ಕೆ.ಜಿಗೆ 11,400 ಶುಲ್ಕ ನಿಗದಿಪಡಿಸಿದೆ. ಗೋಏರ್ ಕೂಡಾ ಇದೇ ರೀತಿಯಲ್ಲಿ ದರವನ್ನು ಹೆಚ್ಚಿಸಿದೆ. ಸ್ಪೈಸ್‌ಜೆಟ್‌ನಲ್ಲಿ ಹೆಚ್ಚುವರಿ 5,10,15,20 ಮತ್ತು 30 ಕೆ.ಜಿಗೆ ಕ್ರಮವಾಗಿ 1,600 ರೂ., 3,200 ರೂ., 4,800 ರೂ., 6,400 ರೂ. ಹಾಗೂ 9,600 ರೂ. ದರ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News