ಆಹಾರದ ಗುಣಮಟ್ಟ ಪರಿಶೀಲಿಸಲು ಶಾಲೆಯಲ್ಲಿ ಮಕ್ಕಳ ಜೊತೆ ಮಧ್ಯಾಹ್ನದ ಊಟ ಮಾಡಿದ ಜಿಲ್ಲಾಧಿಕಾರಿ

Update: 2018-06-24 15:41 GMT

ಮುಂಬೈ, ಜೂ. 24: ಕೇರಳ ಆಲಪ್ಪುಳದ ಜಿಲ್ಲಾಧಿಕಾರಿಯ ಅರ್ಪಣಾ ಮನೋಭಾವ, ತಳಮಟ್ಟದ ಜನರ ಬಗೆಗಿನ ಕಾಳಜಿ ಬಗ್ಗೆ ಆನ್‌ಲೈನ್‌ನಲ್ಲಿ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಈ ವಾರದ ಆರಂಭದಲ್ಲಿ ಜಿಲ್ಲಾಧಿಕಾರಿ ಎಸ್. ಸುಹಾಸ್ ಮದ್ಯಾಹ್ನದ ಊಟದ ಗುಣಮಟ್ಟ ಪರಿಶೀಲಿಸಲು ಜಿಲ್ಲೆಯ ಶ್ರೀದೇವಿ ವಿಲಾಸಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಚ್ಚರಿಯ ಭೇಟಿ ನೀಡಿದರು.

ವಿದ್ಯಾರ್ಥಿಗಳೊಡನೆ ಭೋಜನ ಮುಗಿಸಿದಾಗ ಎಲ್ಲರಿಗೂ ಅಚ್ಚರಿ ಉಂಟಾಗಿತ್ತು. ಅವರ ಈ ನಡತೆ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಅದೇ ರೀತಿ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಶಾಲೆಗೆ ಭೇಟಿ ನೀಡಿದ ಬಗ್ಗೆ ಜಿಲ್ಲಾಧಿಕಾರಿ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ 3000 ಲೈಕ್‌ಗಳು ಬಿದ್ದುವು ಹಾಗೂ 3000 ಶೇರ್ ಆದವು. ಈ ಪೋಸ್ಟ್‌ನಲ್ಲಿ ಅವರು ಪರಿಶೀಲನೆ ಉದ್ದೇಶದಿಂದ ಶಾಲೆಗೆ ಭೇಟಿ ನೀಡಿದೆ ಎಂದು ಹೇಳಿದ್ದಾರೆ.

 ಪೋಸ್ಟ್ ಪ್ರಕಾರ ಶಾಲೆಯಲ್ಲಿ ನೀಡುತ್ತಿರುವ ಅನ್ನ, ಮೊಸಲು, ಸೌತೆ ಕಾಯಿ ಹಾಗೂ ಬಟಾಟೆ ಕರಿ ಒಳಗೊಂಡಿರುವ ಊಟದ ಗುಣಮಟ್ಟದ ಬಗ್ಗೆ ಜಿಲ್ಲಾಧಿಕಾರಿಗೆ ತೃಪ್ತಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News