ಉಪ್ಪೂರು ದೇವಳದಲ್ಲಿ ಫ್ಲಾಸ್ಟಿಕ್ ನಿಷೇಧ ಫಲಕ ಅನಾವರಣಾ
Update: 2018-06-24 21:30 IST
ಉಡುಪಿ, ಜೂ.24: ಉಪ್ಪೂರು ಮಹಾತೋಭಾರ ಶ್ರೀಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಫ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಸುಚನಾ ಫಲಕವನ್ನು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ತುಲಾ ಭಾರ ಸೇವೆಯನ್ನು ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಟಿ.ಜೆ.ಮೆಂಡನ್, ಕಾರ್ಯದರ್ಶಿ ಯು.ಎಲ್.ಭಟ್, ಸದಸ್ಯ ರಾದ ರವೀಂದ್ರ ಪೂಜಾರಿ, ಜಯಂತ್ ಕುಮಾರ್, ಚಂದಪ್ಪ, ಹೂವಯ್ಯ ಶೇರಿಗಾರ, ಅರ್ಚಕ ಗುರುರಾಜ ಅಡಿಗ, ರಾಜು ಪೂಜಾರಿ, ಜಯಲಕ್ಷ್ಮಿ ಶೆಟ್ಟಿ, ಸ್ಥೀಳಿಯರಾದ ಸದಾಶಿವ ಶೆಟ್ಟಿ, ರತ್ನಾಕರ ಶೆಟ್ಟಿ, ಕೃಷ್ಣ ನಾಯಕ್, ಶ್ರೀನಿವಾಸ ಹೆಬ್ಬಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶ್ರೀಶ ಉಪಾಧ್ಯಾಯ ಮೊದಲಾ ದವರು ಉಪಸ್ಥಿತರಿದ್ದರು.