ಮರ ಕಳವು ಪ್ರಕರಣ: 6 ಮಂದಿಯ ಬಂಧನ
Update: 2018-06-24 21:32 IST
ಹೆಬ್ರಿ, ಜೂ.24: ಹೆಬ್ರಿಯ ಸೋಮೇಶ್ವರ ವನ್ಯಜೀವಿ ವಿಭಾಗದ ಬಚ್ಚಪ್ಪು ಜಡ್ಡೋಳ್ಳಿ ಅರಣ್ಯ ಪ್ರದೇಶದಲ್ಲಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಅರಣ್ಯಾಧಿಕಾರಿಗಳ ತಂಡ ಶುಕ್ರವಾರ ಬಂಧಿಸಿದೆ.
ಶ್ರೇಯಸ್, ಸಚಿನ್, ರಾಘವೇಂದ್ರ, ಸುಕೇಶ್, ನಿತೇಶ್, ಅಕ್ಷಯ್ ಬಂಧಿತ ಆರೋಪಿಗಳಾಗಿದ್ದು, ಸುಧಾಕರ ಮತ್ತು ಸತೀಶ್ ಎಂಬವರು ತಲೆಮರೆಸಿಕೊಂಡಿ ದ್ದಾರೆ. ಇವರು ಸುಮಾರು 2 ಲಕ್ಷ ರೂ. ವೌಲ್ಯದ 7 ಸಾಗುವಾನಿ ಮರಗಳನ್ನು ಕೆಲದಿನಗಳ ಹಿಂದೆ ಕಳವು ಮಾಡಿದ್ದಾರೆಂದು ದೂರಲಾಗಿದೆ.
ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್ ದಾಸ್ ಮಾರ್ಗದರ್ಶನದಲ್ಲಿ ಸೋಮೇಶ್ವರ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ವಾಣಿಶ್ರೀ ಹೆಗಡೆ ನೇತೃತ್ವದಲ್ಲಿ ಇಲಾಖೆಯ ಶ್ರುತಿ ಶೇಖರ ಗೌಡ, ರಾಘವೇಂದ್ರ ಈ ಕಾರ್ಯಾ ಚರಣೆ ನಡೆಸಿದ್ದರು.