ಕೆಥೊಲಿಕ್ ಸಭಾ ಸವಾಜಮುಖಯಾಗಿ ಕೆಲಸ ನಿರ್ವಹಿಸಲಿ: ಬಿಷಪ್ ಜೆರಾಲ್ಡ್ ಲೋಬೊ

Update: 2018-06-24 16:26 GMT

ಉಡುಪಿ, ಜೂ.24: ಸಂಘಟನೆಗಳು ಸಮಾಜಮುಖಿಯಾಗಿ, ಸರ್ವ ಸಮು ದಾಯದೊಂದಿಗೆ ಕೂಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಅದು ತನ್ನ ನಿಜವಾದ ಅಸ್ತಿತ್ವವನ್ನು ತೋರಿಸಲು ಶಕ್ತವಾಗುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಟ್ರೈಸೆಂಟಿನರಿ ಸಭಾಂಗಣದಲ್ಲಿ ರವಿವಾರ ನಡೆದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆ ಮತ್ತು ಸಹಮಿಲನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಡೀ ಧರ್ಮಪ್ರಾಂತ್ಯವು ಸುಮಾರು 15 ಸಾವಿರ ಕೆಥೊಲಿಕ್ ಕುಟುಂಬ ಗಳನ್ನು ಹೊಂದಿದ್ದು ಅದರಲ್ಲಿ 13ಸಾವಿರ ಮಂದಿ ಕೆಥೊಲಿಕ್ ಸಭಾ ಸಂಘ ಟನೆಯ ಸದಸ್ಯತ್ವ ಹೊಂದಿದ್ದಾರೆ. ಇದು ಸಂಘಟನೆ ಮಾಡುವ ಕಾರ್ಯ ವೈಖರಿಯನ್ನು ತೋರಿಸುತ್ತದೆ. ಸದಸ್ಯರು ಇದ್ದಲ್ಲಿ ಅಂತಹ ಸಂಘಟನೆ ಬಲಿಷ್ಠ ಗೊಳ್ಳುವು ದರೊಂದಿಗೆ ಆ ಸಮಾಜದ ಧ್ವನಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ ಎಂದರು.

ಕೆಥೊಲಿಕ್ ಸಭಾ ಸಂಘಟನೆಯು ಇತರ ಸಂಘಟನೆ ಹಾಗೂ ಸಮುದಾಯ ಗಳೊಂದಿಗೆ ಹೆಚ್ಚು ಬೆರೆತು ಕಾರ್ಯನಿರ್ವಹಿಸುವ ಅಗತ್ಯತೆ ಇಂದಿನ ದಿನ ಗಳಲ್ಲಿ ಹೆಚ್ಚಾಗಿದೆ. ಸಂಘಟನೆಯು ಸಮುದಾಯದಲ್ಲಿ ಯಶಸ್ವಿ ಉದ್ಯಮಿಗಳು, ರಾಜಕೀಯ ನಾಯಕರನ್ನು ಬೆಳೆಸುವಲ್ಲಿ, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವತ್ತ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ಮುಖ್ಯ ಭಾಷಣಾಕಾರರಾಗಿ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕ ಎಲ್‌ರೋಯ್ ಕಿರಣ್ ಕ್ರಾಸ್ತಾ ಮಾತನಾಡಿದರು. ಹಿಮಾಚಲ ಪ್ರದೇಶ ಸರಕಾರದಿಂದ ಅಂಚೆ ಚೀಟಿ ಗೌರವಕ್ಕೆ ಪಾತ್ರರಾದ ಸಿಸ್ಟರ್ ಜಸಿಂತಾ ನೊರೊನ್ಹಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮರ್ವಿನ್ ಆರಾನ್ಹಾ, ಸಂದೇಶ ಪ್ರಶಸ್ತಿ ಪುರಸ್ಕೃತ ವಿಲ್ಸನ್ ಒಲಿವೇರಾ, ರಾಷ್ಟ್ರ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಡೆಲ್ಫಿನ್ ಡಿಸೋಜ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ನಿವೃತ್ತ ಶಿಕ್ಷಕ, ಕವಿ ಅಲ್ಫೋನ್ಸ್ ಡಿಸೋಜ ಬ್ರಹ್ಮಾವರ ಅವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೆಥೊಲಿಕ್ ಸಭಾದ ನೂತನ ವೆಬ್‌ಸೈಟ್ ಮತ್ತು ಟೆಲಿಫೋನ್ ಡೈರಕ್ಟರಿಯನ್ನು ಅನಾವರಣಗೊಳಿಸಲಾಯಿತು. ಡಾ.ಜೆರಾಲ್ಡ್ ಪಿಂಟೊ ಅವರ ಸಣ್ಣ ಕಥೆಗಳ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೇಡ್ ಡಿಸೋಜ, ಎಐಸಿಯು ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ, ರಾಜ್ಯಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ನಿರ್ಗಮನ ಅಧ್ಯಕ್ಷ ಅನಿಲ್ ಲೋಬೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕಲ್ಯಾಣಪುರ ವಲಯ ನಿರ್ದೇಶಕ ವಂ.ಡಾ. ಲೊರೇನ್ಸ್ ಡಿಸೋಜ, ಮಂಗಳೂರು ಕೆಥೊಲಿಕ್ ಸಭಾ ಅಧ್ಯಕ್ಷ ರೋಲ್ಫಿ ಡಿಕೊಸ್ತ, ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜ, ಉಡುಪಿ ಕೆಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಕಾರ್ಯದರ್ಶಿ ಜಸಿಂತಾ ಕುಲಾಸೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನೂತನ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಜ, ಕೋಶಾಧಿಕಾರಿ ಸೊಲಮನ್ ಅಲ್ವಾರಿಸ್, ಕಲ್ಯಾಣಪುರ ವಲಯ ಅಧ್ಯಕ್ಷ ಸಂತೋಷ್ ಕರ್ನೆಲಿಯೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News