ಪ್ರಧಾನಿಯಿಂದ ದಿಲ್ಲಿ ಮೆಟ್ರೊ ಉದ್ಘಾಟನೆ

Update: 2018-06-24 17:02 GMT

ಹೊಸದಿಲ್ಲಿ, ಜೂ. 24: ದಿಲ್ಲಿ ಮೆಟ್ರೋದ ಗ್ರೀನ್ ಲೈನ್‌ನ 11 ಕಿ.ಮೀ. ಉದ್ದದ, ಸಂಪೂರ್ಣ ಮೇಲ್ದರ್ಜೆಗೇರಿಸಿದ ಮಂಡ್ಕಾ-ಬಹಾದುರ್ಗಢ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಉದ್ಘಾಟಿಸಿದರು.

ಈಗಿರುವ ಗ್ರೀನ್ ಲೈನ್‌ನ ವಿಸ್ತರಣೆಯಾಗಿರುವ, ಏಳು ನಿಲ್ದಾಣಗಳನ್ನು ಒಳಗೊಂಡ ಮಂಡ್ಕಾ-ಬಹಾದುರ್ಗಢ್ ವ್ಯಾಪ್ತಿ ಇಂದರ್‌ಲೋಕ್‌ನಿಂದ ಮುಂಡ್ಕಾದ ವರೆಗೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸೌಲಭ್ಯವನ್ನು ತನ್ನ ಕಚೇರಿಯಿಂದ ರಿಮೋಟ್ ಕಂಟ್ರೋಲ್ ಬಳಸಿ ಉದ್ಘಾಟಿಸಿದರು. ವೀಡಿಯೊ ಕಾನ್ಫರೆನ್ಸ್‌ನಲ್ಲಿ ಉದ್ಘಾಟನ ಸಮಾರಂಭ ನೆರವೇರಿಸಿದ ಪ್ರಧಾನಿ, ಈ ಮೆಟ್ರೋ ಲೈನ್ ಬಹಾದುರ್ಗಢ್‌ದ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಒದಗಿಸಲಿದೆ ಎಂದರು. ‘‘ಇಲ್ಲಿ ಸಂಪರ್ಕ ಹಾಗೂ ಅಬಿವೃದ್ಧಿಯ ನಡುವೆ ನೇರ ಸಂಬಂಧ ಇದೆ. ಈ ಮೆಟ್ರೊದಿಂದ ಬಹಾದುರ್ಗಢ್‌ಕ್ಕೆ ಹೆಚ್ಚಿನ ಜನರು ಆಗಮಿಸಲಿದ್ದಾರೆ. ಇದು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶವನ್ನು ಕೂಡ ಒದಗಿಸಲಿದೆ’’ ಎಂದು ಪ್ರಧಾನಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News