×
Ad

ಜೂ.27: ಮೀನುಗಾರಿಕೆ ಎಚ್ಚರಿಕೆ ಕುರಿತು ಕಾರ್ಯಾಗಾರ

Update: 2018-06-25 18:36 IST

ಮಂಗಳೂರು, ಜೂ.25: ಭಾರತೀಯ ಹವಾಮಾನ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ‘ಮೀನುಗಾರಿಕೆ ಎಚ್ಚರಿಕೆ’ ಕುರಿತು ಜೂ.27ರಂದು ಬೆಳಗ್ಗೆ 9:45ಕ್ಕೆ ಮೀನುಗಾರಿಕಾ ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದೆ.

ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥೆ ಡಾ. ಗೀತಾ ಅಗ್ನಿಹೋತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಂಡಮಾರುತ ಎಚ್ಚರಿಕೆ, ಮೀನುಗಾರಿಕೆ ಎಚ್ಚರಿಕೆ, ಕರಾವಳಿ ಹವಾಮಾನ ಮಾಹಿತಿ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಸಂದರ್ಭ ವಿಜ್ಞಾನಿಗಳು, ಮೀನುಗಾರರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಸಂವಾದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News