ಜೂ.28: ಮಲೇರಿಯಾ ಜಾಗೃತಿ ಕಾರ್ಯಕ್ರಮ
Update: 2018-06-25 18:37 IST
ಮಂಗಳೂರು, ಜೂ.25: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವಿಶೇಷ ಆಂದೋಲನದ ಅಂಗವಾಗಿ ಜೂ.28ರಂದು ಮನಪಾ ವ್ಯಾಪ್ತಿಯ ಎಲ್ಲಾ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿ ಪ್ರದೇಶಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮನಪಾ ಆರೋಗ್ಯ ವಿಭಾಗದ ತಂಡಗಳು ಭೇಟಿ ನೀಡಿ, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನ, ಜ್ವರ ಪತ್ತೆಗಾಗಿ ರಕ್ತಲೇಪನ ಸಂಗ್ರಹ, ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.