×
Ad

ಕುಗ್ರಾಮಗಳ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದೇ ನಿಜವಾದ ದೇಶಸೇವೆ: ಯು.ಟಿ ಖಾದರ್

Update: 2018-06-25 18:46 IST

ಬಂಟ್ವಾಳ, ಜೂ. 25: ಕುಗ್ರಾಮಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಲ್ಲಿನ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದೇ ನಿಜವಾದ ದೇಶಸೇವೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಬಂಟ್ವಾಳ ವಲಯ ಸಮಿತಿಯಿಂದ ರವಿವಾರ ಸಂಜೆ ಮೊಡಂಕಾಪುವಿನ ಅನುಗ್ರಹಾ ಸಭಾಭವನದಲ್ಲಿ ನಡೆದ ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. 

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮಾತನಾಡಿದರು. ಕ್ಯಾಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಸ್ಟೇನಿ ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು. 

ಕ್ಯಾಥೋಲಿಕ್ ಮಂಗಳೂರಿನ ಅಧ್ಯಕ್ಷ ರೋಲ್ ಡಿಕೋಸ್ತಾ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಾಲ್ಟರ್ ನೊರೊನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. 

ಬಂಟ್ವಾಳ ವಲಯ ಧರ್ಮಗುರುಗಳಾದ ಗ್ರೆಗರಿ ಡಿಸೋಜ, ಫೆಡ್ರಿಕ್ ಮೊಂತೆರೊ, ಜೊನ್ಸನ್ ಸಿಕ್ವೇರ, ಪೀಟರ್ ಅರಾನ್ಹಾ, ಕ್ಲೋಡಿ ವಾಸ್, ವಲೇರಿಯನ್ ಡಿಸೋಜ, ಎಲಿಯಾಸ್ ಡಿಸೋಜ, ಆಲ್ಬನ್ ಡಿಸೋಜ, ಆಲ್ವಿನ್ ಡಿಕುನ್ಹಾ, ಕಿರಣ್ ಮ್ಯಾಕ್ಸಿಂ ಪಿಂಟೊ, ಜೆರಾಲ್ಡ್ ಲೋಬೋ, ಬಂಟ್ವಾಳ ಚರ್ಚ್ ಪಾಲನಾ ಪರಿಷದ್‍ನ ಉಪಾಧ್ಯಕ್ಷ ಸಂದೀಪ್ ಮಿನೇಜಸ್, ಕಥೋಲಿಕ್ ಸಭಾದ ಸಮಿತಿಗಳ ಅಧ್ಯಕ್ಷರಾದ ಅನಿತಾ ಡೆಸಾ, ಲಾರೆನ್ಸ್ ಡಿಸೋಜ, ಜೀವನ್ ಲೋಬೊ, ಕಿರಣ್ ಪಿಂಟೊ, ಗ್ರೆಗರಿ ಕುವೆಲ್ಲೊ, ವಿನ್ಸೆಂಟ್ ರೊಡ್ರಿಗಸ್, ಫ್ಲೊರಿನ್ ಫೆರ್ನಾಂಡಿಸ್, ಮಾರ್ಕ್ ಲೋಬೊ, ಸ್ಟೇನಿ ಲಸ್ರಾದೊ, ವಿನೀತ್ ಲಸ್ರಾದೊ, ಶಾಂತಿ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟ್ವಾಳ ವಲಯದ ಮಾಜಿ ಅಧ್ಯಕ್ಷ ರಿಚರ್ಡ್ ಮಿನೇಜಸ್ ಸ್ವಾಗತಿಸಿ, ಫ್ರಾನ್ಸಿಸ್ ಮೆಂಡೋನ್ಸಾ ಮೇರಮಜಲು, ಸಂದೀಪ್ ಮಿನೇಜಸ್, ಗ್ರೆಗೊರಿ ರೊಜಾರಿಯೋ ಕುಪ್ಪೆಪದವು ಅಭಿನಂದನಾ ಪತ್ರ ವಾಚಿಸಿದರು. ಅಲೋನ್ಸ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News