ಕೇಂದ್ರೀಯ ವಿದ್ಯಾಲಯ ಸಂಘಟನ್ ರೀಜಿನಲ್ ಸ್ಪೋರ್ಟ್ಸ್ ಮೀಟ್‌ : ಶುಭ್ರ ಜ್ಯೋತ್ಸ್ನಗೆ ಚಿನ್ನದ ಪದಕ

Update: 2018-06-25 14:05 GMT

ಮಂಗಳೂರು, ಜೂ.25: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೇಂದ್ರೀಯ ವಿದ್ಯಾಲಯ ಸಂಘಟನ್ ರೀಜಿನಲ್ ಸ್ಪೋರ್ಟ್ಸ್ ಮೀಟ್‌ನಲ್ಲಿ ಕೇಂದ್ರೀಯ ವಿದ್ಯಾಲಯ ಮಂಗಳೂರು ನಂ.2 ಇಲ್ಲಿನ ಏಳನೇ ತರಗತಿ ವಿದ್ಯಾರ್ಥಿನಿ ಶುಭ್ರ ಜ್ಯೋತ್ಸ್ನ ಎಸ್. ಅಡ್ಡೂರ್ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ರೋಡ್ ರೇಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ರಿಂಕ್ ಐ ಸ್ಕೇಟಿಂಗ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದು, ಜೂ.25ರಿಂದ 28ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ 49ನೇ ಕೆವಿಎಸ್ ನ್ಯಾಷನಲ್ ಸ್ಪೋಟ್ಸ್ ಮೀಟ್‌ಗೆ ಆಯ್ಕೆಯಾಗಿದ್ದಾರೆ.

ಶುಭ್ರ ಜ್ಯೋತ್ಸ್ನ 14ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಡಾ.ಸೂರ್ಯ ಎನ್.ಆರ್. ಅಡ್ಡೂರ್ ಪುತ್ರಿಯಾಗಿರುವ ಈಕೆ ಮಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯೆಯಾಗಿದ್ದು, ತರಬೇತುದಾರ ಮಹೇಶ್‌ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News