ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿರುವ ಸ್ಪೋರ್ಟ್ಸ್ ಕ್ಲಬ್‍ಗಳಿಗೆ ಪ್ರಶಸ್ತಿ: ಅರ್ಜಿ ಆಹ್ವಾನ

Update: 2018-06-25 14:17 GMT

ಮಂಗಳೂರು,ಜೂ.25: ಕ್ರೀಡೆಯೊಂದಿಗೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸ್ಪೋರ್ಟ್ಸ್ ಕ್ಲಬ್‍ಗಳಿಗೆ ‘ಮೌಲಾನಾ ಇ.ಎಂ ಶಾಫಿ ಸ್ಮಾರಕ ಪ್ರಶಸ್ತಿ’ ಗಳನ್ನು ನೀಡುವ ಸಲುವಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿರುವ 3 ಸ್ಪೋರ್ಟ್ಸ್ ಕ್ಲಬ್‍ಗಳಿಗೆ ಪ್ರಶಸ್ತಿಯೊಂದಿಗೆ ನಗದು ಪುರಸ್ಕಾರ ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ರಮವಾಗಿ ರೂ. 25000/-, ರೂ. 15000/- ಮತ್ತು ರೂ. 10000/- ನೀಡಿ ಅಭಿನಂದಿಸಲಾಗುವುದು. 

ಸ್ಪೋರ್ಟ್ಸ್ ಕ್ಲಬ್‍ಗಳು ಮುಂದಿನ ಮೂರು ತಿಂಗಳಲ್ಲಿ ಮಾಡುವ ಎಲ್ಲಾ ಸಮಾಜ ಸೇವಾ ಕಾರ್ಯಗಳ ಫೋಟೊ ಸಹಿತ ವರದಿಯೊಂದಿಗೆ ಅರ್ಜಿಯನ್ನು 2018 ಅಕ್ಟೋಬರ್ 10 ರೊಳಗೆ ಟ್ಯಾಲೆಂಟ್ ಸಂಸ್ಥೆಗೆ ಸಲ್ಲಿಸಬಹುದು. ಹೆಚ್ಚು ಖರ್ಚು ಮಾಡದೆ ಏನೆಲ್ಲಾ ಸರಳ ಸಮಾಜ ಸೇವೆಗಳನ್ನು ಮಾಡಬಹುದು ಎಂಬ ಬಗ್ಗೆ ಉಚಿತ ತರಬೇತಿಯನ್ನು ಟಿ.ಆರ್.ಎಫ್ ಸಂಸ್ಥೆಯಿಂದ ನೀಡಲಾಗುವುದು. ಆಸಕ್ತ ಸ್ಪೋರ್ಟ್ಸ್ ಕ್ಲಬ್‍ಗಳು ನಮ್ಮನ್ನು ಸಂಪರ್ಕಿಸಬಹುದು ಎಂದು  ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಅಸ್ಪರ್ ಹುಸೈನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಯೆನೆಪೊಯ ನರ್ಸಿಂಗ್ ಹೋಮ್ ಎದುರು, ಕಂಕನಾಡಿ, ಮಂಗಳೂರು-2 ಮೊಬೈಲ್: 7760508664, 9972283365 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News