ಸಸಿ ವಿತರಿಸುವ ಮೂಲಕ ಮದ್ರಸ ಪ್ರಾರಂಭೋತ್ಸವ

Update: 2018-06-25 17:29 GMT

ಉಳ್ಳಾಲ,ಜೂ.25 ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 - 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ ಕಲ್ಲಾಪು ಪಟ್ಲದ ಮದ್ರಸ ಹಾಲ್ ನಲ್ಲಿ ನಡೆಯಿತು.

ಮದ್ರಸ ಪ್ರಾರಂಭೋತ್ಸವವನ್ನು ಕಲ್ಲಾಪುವಿನ ಸಮಾಜ ಸ್ನೇಹಿಯೋರ್ವರ ಸಂಪೂರ್ಣ ಸಹಕಾರದೊಂದಿಗೆ ಮನೆ ಮನೆಗೆ ಸಸಿ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು.

ತಖ್ವಾ ಜುಮಾ ಮಸೀದಿ ಪಟ್ಲ ಅಧ್ಯಕ್ಷರಾದ ಮಹಮೂದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮದ್ರಸ ಅಧ್ಯಾಪಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಲ ಜುಮಾ ಮಸೀದಿ ಮುದರ್ರಿಸರಾದ ಅಬೂ ಮುಖ್ತಾರ್ ಅಶ್ರಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಸ್ಥ, ಸುದ್ರಢ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಅರಿವು ಅನಿವಾರ್ಯ ಎಂದು ತಿಳಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಕೇಂದ್ರ ಸಮಿತಿ ಸದಸ್ಯರಾದ ಮೊಯ್ದಿನ್, ಪಟ್ಲ ಮಸೀದಿ ಉಪಾಧ್ಯಕ್ಷರಾದ ಹಾರಿಸ್, ಪ್ರಧಾನ ಕಾರ್ಯದರ್ಶಿ ಸದ್ದಾಂ ಕಲ್ಲಾಪು, ಮದ್ರಸ ಅಧ್ಯಾಪಕರಾದ ಶಾಫಿ ಸಖಾಫಿ ಹಾಗು ಮದ್ರಸ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಮದ್ರಸ ಮುಖ್ಯೋಪಾಧ್ಯಾಯರಾದ ಮುನೀರ್ ಲತೀಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News