ಧಾರ್ಮಿಕ ಶ್ರದ್ಧೆಯೇ ಸಂಸ್ಕೃತಿಯ ಜೀವಾಳ: ರಘುಪತಿ ಭಟ್
ಬ್ರಹ್ಮಾವರ, ಜೂ.25: 52 ಹೇರೂರಿನ ಶ್ರೀದುರ್ಗಂಬಾ ಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕವು ಬ್ರಹ್ಮಶ್ರೀ ವಿಶ್ವನಾಥ ಪುರೋಹಿತರ ಆಚಾರ್ಯತ್ವದಲ್ಲಿ ಇತ್ತೀಚೆಗೆ ಜರಗಿತು.
ವಾರ್ಷಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಬ್ರಹ್ಮ ಕಲಶ, ದೇವತಾ ಆರಾಧನೆ, ನಾಗಾ ರಾಧನೆ ಹಾಗೂ ಭೂತಾರಾಧನೆಗಳಿಂದ ಇಲ್ಲಿನ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಧಾರ್ಮಿಕ ಶ್ರದ್ಧೆಯೇ ನಮ್ಮ ಸಂಸ್ಕೃತಿಯ ಜೀವಾಳ ಎಂದು ಹೇಳಿದರು.
ಸಹಚಿಂತನ ಮಾಸ ಪತ್ರಿಕೆಯ ಗೌರವ ಪ್ರಧಾನ ಸಂಪಾದಕ ಬಿ.ಎ. ಆಚಾರ್ಯ ಮುಖ್ಯ ಅತಿಥಿಯಾಗಿದ್ದರು. ಜಯಾನಂದ ಆಚಾರ್ಯ ಉಪ್ಪೂರು ಧಾರ್ಮಿಕ ಪ್ರವಚನ ನೀಡಿದರು. ಗದ್ದಿಗೆ ಅಮ್ಮನ ಅರ್ಚಕ ಎಚ್.ವಿ. ಅನಂತಯ್ಯ ಆಚಾರ್ಯ ಉಪಸ್ಥಿತರಿದ್ದರು.
ಡಾ.ಎಚ್.ವಿ.ದಾಸಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧು ಕರಆಚಾರ್ಯ ಸ್ವಾಗತಿಸಿದರು. ಮಟಪಾಡಿ ಪ್ರಭಾಕರ ಆಚಾರ್ಯ ಕಾರ್ಯ ಕ್ರಮ ನಿರೂಪಿಸಿದರು. ಪಲ್ಲವಿ ವಂದಿಸಿದರು. ಬಳಿಕ ಯಕ್ಷಗಾನದ ಹಾಡು ಗಾರಿಕೆ, ಭಕ್ತಿ ಸಂಗೀತ, ಭಜನಾ ಕಾರ್ಯಕ್ರಮ ಜರಗಿತು.