ಬ್ರಹ್ಮಾವರ : ನಾಲ್ಕು ತಿಂಗಳ ಗರ್ಭಿಣಿ ಮೃತ್ಯು
Update: 2018-06-25 23:50 IST
ಬ್ರಹ್ಮಾವರ, ಜೂ.25: ಸುಮಾರು ನಾಲ್ಕು ತಿಂಗಳ ಗರ್ಭಿಣಿ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸರಸ್ವತಿ ಎಂಬವರ ಮಗಳು ದಿವ್ಯಾ(31) ಎಂದು ಗುರುತಿಸಲಾಗಿದೆ.
ವಿಪರೀತ ವಾಂತಿ ಮಾಡುತ್ತಿದ್ದ ನಾಲ್ಕು ತಿಂಗಳ ಗರ್ಭಿಣಿ ದಿವ್ಯಾಳನ್ನು ಜೂ.19ರಂದು ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಜೂ.21ರಂದು ದಿವ್ಯಾಳಿಗೆ ವಿಪರೀತ ರಕ್ತಸ್ರಾವ ಪ್ರಾರಂಭವಾಗಿದ್ದು ನಿಯಂತ್ರಣಕ್ಕೆ ಬಾರದ ಕಾರಣ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಜೂ.24ರಂದು ಸಂಜೆ ವೇಳೆ ದಿವ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.