ಬೈಂದೂರು : ಮಹಿಳೆ ನಾಪತ್ತೆ
Update: 2018-06-25 23:55 IST
ಬೈಂದೂರು, ಜೂ.25: ತಗ್ಗರ್ಸೆ ಗ್ರಾಮದ ದಾಸೋಡಿಯ ಪಾರ್ವತಿ(35) ಎಂಬವರು ಜೂ.24ರಂದು ಬೆಳಗ್ಗೆ ಅಂಗಡಿಯಿಂದ ಸಾಮಾನು ತರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.