ಮೈಯ್ಯರಬೈಲು: ದರೆ ಕುಸಿದು ಮನೆಗೆ ಹಾನಿ
Update: 2018-06-26 11:56 IST
ಬಂಟ್ವಾಳ, ಜೂ.26: ದರೆ ಕುಸಿದು ಮನೆಗೆ ಹಾನಿಯಾಗಿ ನಷ್ಟವುಂಟಾದ ಘಟನೆ ಬಿ.ಸಿ.ರೋಡ್ ಸಮೀಪದ ಮೈಯ್ಯರಬೈಲು ಎಂಬಲ್ಲಿ ನಡೆದಿರುವುದು ಮಂಗಳವಾರ ವರದಿಯಾಗಿದೆ.
ಬಿ. ಮೂಡ ಗ್ರಾಮದ ಮೈಯ್ಯರಬೈಲು ನಿವಾಸಿ ಸುರೇಶ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿದ್ದು, ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕಾರ್, ಸಿಬ್ಬಂದಿ ಸದಾಶಿವ ಕೈಕಂಬ ಭೇಟಿ ನೀಡಿ ಪರಿಶೀಲನೆ ನಡೆಸಿದರು.