ಜುಲೈ 21; ಮಂಗಳೂರಿನಿಂದ ಹಜ್ ಯಾತ್ರೆ ಆರಂಭ : ಪೂರ್ವಭಾವಿ ಸಭೆ

Update: 2018-06-26 14:45 GMT

ಮಂಗಳೂರು,ಜೂ.26: ಸರಕಾರಿ ಸ್ವಾಮ್ಯದ ಹಜ್ ಸಮಿತಿ ಮೂಲಕ ಪವಿತ್ರ ಯಾತ್ರೆಗೈಯಲಿರುವ ಹಜ್ ಯಾತ್ರಾರ್ಥಿಗಳು ಜುಲೈ 21 ರಿಂದ 23 ರವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸರ್ಫರಾಝ್ ಖಾನ್ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ  ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. 

ರಾಜ್ಯದಿಂದ ಈ ಬಾರಿ 6600 ಕ್ಕೂ ಅಧಿಕ ಹಜ್ ಯಾತ್ರಿಕರಿದ್ದು, ಆ ಪೈಕಿ ದ.ಕ., ಉಡುಪಿ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸೇರಿದ 500 ರಷ್ಟು ಯಾತ್ರಿಕರು ಮಂಗಳೂರಿನಿಂದ ತೆರಳುವರು. ಈ ಬಾರಿ ಇಲ್ಲಿನ ಯಾತ್ರಿಕರು ಮದೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಸಭೆಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಖ್, ಹಜ್ ನೋಡಲ್ ಅಧಿಕಾರಿ ಸಯ್ಯದ್  ಇಜಾಝ್ ಅಹಮದ್, ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೇನಪೋಯ ಮುಹಮ್ಮದ್ ಕುಂಞಿ ಹಾಜಿ, ಕಾರ್ಯದರ್ಶಿ ಎಸ್. ಎಂ. ರಶೀದ್ ಹಾಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು ಹಾಜಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಶ್ರೀ ವಿ. ವೆಂಕಟೇಶ್ ರಾವ್,  ಅಧಿಕಾರಿಗಳಾದ ಅನಿಲ್ ಕುಮಾರ್, ಸಿ.ವಿ. ರವೀಂದ್ರ ನಾಥ, ಕೆ. ಅನ್ವರ್ ಹುಸೇನ್, ಸೆಂಥಿಲ್ ಕುಮಾರ್, ಹಜ್ ನಿರ್ವಹಣಾ ಸಮಿತಿ ಪ್ರಮುಖರಾದ ಸಿ.ಮಹ್ಮೂದ್ ಹಾಜಿ, ಎಂ. ಮಹ್ಮೂದ್ ಹಾಜಿ, ಸಿ.ಎಚ್. ಉಳ್ಳಾಲ, ಯಹ್ಯಾ ನಖ್ವ ಉಡುಪಿ, ಹನೀಫ್ ಬಜಪೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News