ಎಟಿಎಂ ನಂ. ಪಡೆದು ಲಕ್ಷ ರೂ. ವಂಚನೆ

Update: 2018-06-26 17:43 GMT

ಮಂಗಳೂರು, ಜೂ.26: ವ್ಯಕ್ತಿಯೋರ್ವನಿಗೆ ಕರೆ ಮಾಡಿ ಎಟಿಎಂ ಹಾಗೂ ಒಟಿಪಿ ನಂ.ನ್ನು ಪಡೆದು ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಕೊನ್ರಾಡ್ ಅಲ್ವೀನ್ ಡಿಸೋಜ ವಂಚನೆಗೊಳಗಾದವರು.

ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿ, ಹಿಂದಿ ಭಾಷೆಯಲ್ಲಿ ತಾನು ಎಸ್‌ಬಿಐ ಬ್ಯಾಂಕ್‌ಮಾತನಾಡುತ್ತಿದ್ದು, ನಿಮ್ಮ ಎ.ಟಿ.ಎಂ. ಕಾರ್ಡ್ ಲ್ಯಾಪ್ಸ್ ಆಗಿದೆ. ಈ ಬಗ್ಗೆ ರಿನಿವಲ್ ಮಾಡಲು ಎಟಿಎಂ ಕಾರ್ಡ್ ನಂ. ಹಾಗೂ ಒಟಿಪಿ ನಂ. ನೀಡುವಂತೆ ತಿಳಿಸಿದ್ದಾನೆ.

ಬ್ಯಾಂಕ್‌ನ ಸಿಬ್ಬಂದಿಯೇ ಕರೆ ಮಾಡಿರುವುದಾಗಿ ನಂಬಿದ ಡಿಸೋಜ, ಎಟಿಎಂ ಕಾರ್ಡ್ ನಂ. ಮತ್ತು ಅವರ ಮೊಬೈಲ್‌ಗೆ 10 ಬಾರಿ ಬಂದಿದ್ದ ಒಟಿಪಿ ನಂಬರ್‌ನ್ನು ನೀಡಿದ್ದಾರೆ. ಬಳಿಕ ಆರೋಪಿಯು ಡಿಸೋಜ ಖಾತೆಯಿಂದ 1 ಲಕ್ಷ ರೂ.ನ್ನು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News