ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಹೆಚ್ಚಳದ ಸಾಧ್ಯತೆ: ಆರ್‌ಬಿಐ
ಮುಂಬೈ, ಜೂ.26: ಬ್ಯಾಂಕಿಂಗ್ ವಲಯಕ್ಕೆ ಮುಂಬರುವ ದಿನಗಳಲ್ಲಿ ನಿರಾಶಾಜನಕ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ತಿಳಿಸಿದ್ದು, ಬ್ಯಾಂಕ್‌ಗಳ ಒಟ್ಟು ಎನ್‌ಪಿಎ(ಅನುತ್ಪಾದಕ ಆಸ್ತಿ ಪ್ರಮಾಣ) ಶೇ.12.2ಕ್ಕೆ ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಬ್ಯಾಂಕಿಂಗ್ ವಲಯದ ಒಟ್ಟು ಅನುತ್ಪಾದಕ ಮುಂಗಡ (ಜಿಎನ್‌ಪಿಎ) ಕೂಡಾ ಇನ್ನಷ್ಟು ಅಧಿಕವಾಗಲಿದೆ . ಕೆಟ್ಟ ಸಾಲಗಳ ಪ್ರಮಾಣ ಅಧಿಕವಾಗಲಿದೆ ಎಂದು ಆರ್‌ಬಿಐಯ ಆರ್ಥಿಕ ಸ್ಥಿರತೆಯ ವರದಿಯಲ್ಲಿ ತಿಳಿಸಲಾಗಿದೆ.
11 ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕೈಗೊಂಡಿರುವ ಸಕಾಲಿಕ ಸುಧಾರಣಾ ಪ್ರಕ್ರಿಯೆಗಳನ್ನು ಉಲ್ಲೇಖಿಸಿರುವ ಎಸ್‌ಬಿಐ, 2018ರ ಮಾರ್ಚ್‌ನಲ್ಲಿ ಶೇ.21 ರಷ್ಟಿದ್ದ ಜಿಎನ್‌ಪಿಎ ಪ್ರಮಾಣ 2019ರ ಮಾರ್ಚ್ ವೇಳೆಗೆ ಶೇ.22.3ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ 11 ಬ್ಯಾಂಕ್‌ಗಳಲ್ಲಿ 6 ಬ್ಯಾಂಕ್‌ಗಳಿಗೆ ಬಂಡವಾಳದ ಕೊರತೆ ಎದುರಾಗಬಹುದು. ಅತ್ಯಧಿಕ ಕೆಟ್ಟ ಸಾಲ ಇರುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್, ಯುಕೊ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ದೇನಾ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಶನ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ಸೇರಿದೆ. ಅಲ್ಲದೆ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳ ಲಾಭದಾಯಕತೆಯೂ ಕುಸಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.