ಕೋಟೇಶ್ವರ: ತಾಯಿ ಮಗು ನಾಪತ್ತೆ

Update: 2018-06-26 18:14 GMT

ಕುಂದಾಪುರ, ಜೂ.26: ಕೋಟೇಶ್ವರ ಅಂಕದಕಟ್ಟೆಯ ಎನ್‌ಆರ್‌ಐ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆ ವಾಸವಾಗಿರುವ ಮೂಲತಃ ಮಧ್ಯ ಪ್ರದೇಶದ ತಾಯಿ ಮಗು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ರಂಜೀತ್ ಸಿಂಗ್ ಎಂಬವರ ಪತ್ನಿ ಕುಂತಿದೇವಿ(28) ಹಾಗೂ ಮಗ ಸನ್ನಿ(7) ಎಂದು ಗುರುತಿಸಲಾಗಿದೆ. ಜೂ.22ರಂದು ಕುಂತಿ ದೇವಿ ಸೈಂಟ್ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯೊಂದಿಗೆ ತನ್ನ ಗಂಡನಿಗೆ ಬೆಂಗಳೂರಿನಲ್ಲಿ ಅಪಘಾತವಾಗಿದೆ ಎಂದು ಹೇಳಿ ಶಾಲೆಯಿಂದ ಮಗನನ್ನು ಕರೆದುಕೊಂಡು ಹೋದವರು ನಾಪತ್ತೆಯಾಗಿದ್ದಾರೆ ಎಂದು ಪತಿ ರಂಜೀತ್ ಸಿಂಗ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News