×
Ad

ಬಂಟ್ವಾಳ ಸಂಚಾರ ಪೊಲೀಸರಿಂದ ರಸ್ತೆ ರಿಪೇರಿ

Update: 2018-06-27 19:41 IST

ಬಂಟ್ವಾಳ, ಜೂ. 27: ಟ್ರಾಫಿಕ್ ನಿಯಂತ್ರಿಸುವ ಪೊಲೀಸರು ಜಡಿ ಮಳೆಯನ್ನೂ ಲೆಕ್ಕಿಸದೆ ಹಾರೆ ಹಿಡಿದು ಚರಂಡಿ ಹಾಗೂ ರಸ್ತೆ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಮೇಲ್ಕಾರ್‌ನಲ್ಲಿ ಚರಂಡಿಯೊಂದು ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದ್ದುದನ್ನು ಗಮನಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಉಪನಿರೀಕ್ಷಕ ಯಲ್ಲಪ್ಪ ಮಾರ್ಗದರ್ಶನದಲ್ಲಿ ರಾಜು, ಶರಣ್ ಗೌಡ ಬಿರಾದಾರ್, ಕುಶಾಲಪ್ಪ, ಮನೋಹರ್, ಮೋನಪ್ಪ ಗೌಡ ಮತ್ತಿತರರು ಮಳೆಯನ್ನೂ ಲೆಕ್ಕಿಸದೆ ಹಾರೆ ಹಿಡಿದು ಚರಂಡಿಯನ್ನು ಬಿಡಿಸಿಕೊಟ್ಟರು. ಪೊಲೀಸರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News