×
Ad

ಹೊಟೇಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಡಾ.ರೋಹಿಣಿ

Update: 2018-06-27 20:07 IST

ಉಡುಪಿ, ಜೂ.27: ಹೊಟೇಲ್ ಕಾರ್ಮಿಕರು ನೀರು, ಆಹಾರದಿಂದ ಸೊಳ್ಳೆ ಹಾಗೂ ಇಲಿಗಳ ಮೂಲಕ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ವೃತ್ತಿ ಆಧಾರಿತ ಕಾಯಿಲೆಗಳ ಪೈಕಿ ಇಲಿಜ್ವರಕ್ಕೆ ತುತ್ತಾಗು ವವರಲ್ಲಿ ಹೊಟೇಲ್ ಕಾರ್ಮಿಕರು ಕೂಡ ಸೇರಿದ್ದಾರೆ. ಆದುದರಿಂದ ಹೊಟೇಲ್‌ಗಳಲ್ಲಿ ಸ್ವಚ್ಛತೆಗೆ ತುಂಬಾ ಆದ್ಯತೆ ನೀಡಬೇಕು ಎಂದುಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹೇಳಿದ್ದಾರೆ.

ಮಣಿಪಾಲ ಕೆಎಂಸಿ ಹೃದ್ರೋಗ ಚಿಕಿತ್ಸಾ ವಿಭಾಗ, ಹೃದಯ ಹಾಗೂ ರಕ್ತ ಪರಿಚಲನಾ ತಂತ್ರಜ್ಞಾನ ವಿಭಾಗ, ಪಥ್ಯಾಹಾರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕ ಸಮಾರಂಭಗಳ ಅಡುಗೆ ತಯಾರಕರು ಹಾಗೂ ಹೊಟೇಲಿನ ಅಡುಗೆ ತಯಾಕರಿಗೆ, ಬಡಿಸುವವರಿಗೆ ಸ್ವಚ್ಛತೆ ಹಾಗೂ ಆರೋಗ್ಯಕರ ತಯಾರಿಕೆಯ ಕುರಿತ ಕಾರ್ಯಾಗಾರವನ್ನು ಬುಧವಾರ ಮಣಿಪಾಲ ಕೆಎಂಸಿ ಇಂಟರ್ಯಾಕ್ಟ್ ಕ್ಲಾಸ್ ರೂಮ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತ ನಾಡಿ, ಸಾರ್ವಜನಿಕ ಸಮಾರಂಭದ ಊಟ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಪ್ರಸಾದವನ್ನು ಬರಿಗೈಯಲ್ಲಿ ನೀಡುವುದು ಬಹಳ ಅಪಾಯಕಾರಿ. ಇದ ರಿಂದ ರೋಗಗಳು ಹರಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆಹಾರ ಬಡಿಸು ವವರಿಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತಿಅಗತ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆಯ ಪ್ರೊವೈಸ್ ಚಾನ್ಸೆಲರ್ ಡಾ. ಪೂರ್ಣಿಮಾ ಬಾಳಿಗ ಮಾತನಾಡಿ, ಆಹಾರ ಮತ್ತು ಆರೋಗ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅತಿ ಮುಖ್ಯವಾಗಿದೆ. ಒಳ್ಳೆಯ ಆಹಾರ ಬೇಕಾದರೆ ಉತ್ತಮ ಆಹಾರವನ್ನು ಸೇವಿಸಬೇಕಾಗುತ್ತದೆ. ಆಯಾ ಸಮಯದಲ್ಲಿ ಸಿಗುವ ಆಯಾ ತರಕಾರಿ, ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಆಹಾರದಲ್ಲಿ ಸಮಾ ತೋಲನವನ್ನು ಕಾಯ್ದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಉಪಾಧ್ಯಕ್ಷ ಎಂ.ವಿಠಲ ಪೈ ಮಾತನಾಡಿದರು. ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಟಾಮ್ ದೇವಾಸಿಯ ಉಪಸ್ಥಿತರಿದ್ದರು. ಸಂಘಟನಾ ಕಾರ್ಯ ದರ್ಶಿ ಡಾ.ಕೃಷ್ಣಾನಂದ ನಾಯಕ್ ಸ್ವಾಗತಿಸಿದರು. ಸುವರ್ಣ ಹೆಬ್ಬಾರ್ ವಂದಿಸಿ ದರು. ಜ್ಯೋತಿ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News