×
Ad

ಹೃದಯಾಘಾತ: ಕುಸಿದು ಬಿದ್ದು ಯುವಕ ಮೃತ್ಯು

Update: 2018-06-27 20:08 IST

ಕಡಬ, ಜೂ. 27: ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸಮೀಪದ ಐತ್ತೂರಿನಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ದೇವಸ್ಯ ಎಂಬವರ ಪುತ್ರ ಪ್ರಿನ್ಸ್ ಪಿ.ಡಿ.(23) ಎಂದು ಗುರುತಿಸಲಾಗಿದೆ. ಈತ ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚಿನ ತೋಟದಲ್ಲಿ ಕೂಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಅಡಿಕೆ‌ ಮರದ ಗುಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣವೇ ಉಳಿದ ಕೆಲಸಗಾರರು ಈತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News