×
Ad

ಶ್ರೀನಿವಾಸ್ ಬಜಾಲ್ ಸ್ಮಾರಕ ರಕ್ತದಾನ ಶಿಬಿರ

Update: 2018-06-27 20:28 IST

ಮಂಗಳೂರು, ಜೂ.27: ಸಮಾಜದಲ್ಲಿನ ಶೋಷಿತರ, ದಮನಿತರ ಜನರ ಪರವಾಗಿ ಯುವಜನ ಸಂಘಟನೆಯಾದ ಡಿವೈಎಫ್‌ಐ ಧ್ವನಿ ಎತ್ತುತ್ತಾ ಬಂದಿದೆ. ಜಿಲ್ಲೆಯಲ್ಲಿ ನಡೆಯುವ ಕೋಮುವಾದಕ್ಕೆ ಎದುರಾಗಿ ಸಾಮರಸ್ಯವನ್ನು ಸ್ಥಾಪಿಸಲು ಹಿಂದೂ ಮುಸ್ಲಿಂ ಐಕ್ಯತೆಯನ್ನು ಉಳಿಸುವ ಹೋರಾಟದಲ್ಲಿ ಡಿವೈಎಫ್‌ಐ ಕಾರ್ಯಕರ್ತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್  ಹೇಳಿದರು.

ಕಾಂ.ಶ್ರೀನಿವಾಸ್ ಬಜಾಲ್‌ರ 16ನೇ ವರ್ಷದ ಹುತಾತ್ಮ ದಿನಾಚರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೋಮುವಾದಕ್ಕೆ ಜಿಲ್ಲೆಯ ಹಲವು ಮಂದಿ ಬಲಿಯಾಗಿದ್ದಾರೆ. ಬಲಿ ಹೊಂದಿದವರು ಹಾಗೂ ಬಲಿ ಪಡೆದುಕೊಂಡವರು ಹಿಂದುಳಿದ ವರ್ಗಗಳ ಯುವಕರು. ಡಿವೈಎಫ್‌ಐ ನಾಯಕ ಶ್ರೀನಿವಾಸ್ ಬಜಾಲ್‌ನಿಂದ ಹಿಡಿದು ಭಾಸ್ಕರ್ ಕುಂಬಳೆ, ಪ್ರವೀಣ್ ಪೂಜಾರಿ, ಹರೀಶ್ ಪೂಜಾರಿ, ಶರತ್ ಮಡಿವಾಳ ಈ ಎಲ್ಲರೂ ಬಡವರ ಮಕ್ಕಳು. ಯುವಜನರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಬದಲು ಈ ರೀತಿ ಧರ್ಮ ರಾಜಕಾರಣದಲ್ಲಿ ಬೀದಿ ಹೆಣಗಳಾಗುತ್ತಿರುವುದು ಮತ್ತು ಕೊಂದ ಕೈಗಳು ಜೈಲು ಸೇರುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಬಿ.ಕೆ.ಇಮ್ತಿಯಾಝ್ ನುಡಿದರು.

ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ಸುರೇಶ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾದಿಕ್ ಕಣ್ಣೂರ್, ಅಶ್ರಫ್, ಕೆಎಂಸಿ ವೈದ್ಯಾಧಿಕಾರಿ ಉಪಸ್ಥಿತರಿದ್ದರು. ದೀಪಕ್ ಬಜಾಲ್ ಧ್ವಜಾರೋಹಣಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News