ಜು.8: ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆ
ಉಡುಪಿ, ಜೂ.27: ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಕಟಪಾಡಿ-ಉಡುಪಿ, ಕಲಾನಿಧಿ ಸಾಂಸ್ಕೃತಿಕ ಕಲಾ ಸಂಸ್ಥೆ ಉಡುಪಿ, ರಾಗವಾಹಿನಿ ಉಡುಪಿ, ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘ನನ್ನ ಹಾಡು ನನ್ನದು’ ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆ ಸೀಸನ್-2ನ್ನು ಜು.8 ರಂದು ಬೆಳಗ್ಗೆ 9ಕ್ಕೆ ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ.
ಸುಗಮ ಸಂಗೀತ ಗೀತಾ ಗಾಯನ ಸ್ಪರ್ಧೆಯು 15ರಿಂದ 60 ವರ್ಷ ವಯಸ್ಸಿನವರಿಗಾಗಿ ಮೂರು ಹಂತದಲ್ಲಿ ನಡೆಯಲಿದ್ದು, ಜು.8ರಂದು ಪ್ರಥಮ ಸುತ್ತಿನ ಆಯ್ಕೆ ಮತ್ತು ಸೆಮಿಫೈನಲ್ ಸ್ಪರ್ಧೆ ನಡೆಯಲಿದೆ. ಸ್ಪರ್ಧಾರ್ಥಿಗಳು ಎರಡೂ ಸುತ್ತಿನಲ್ಲಿ ಶೃತಿ ಪೆಟ್ಟಿಗೆ ಬಳಸಲು ಅವಕಾಶವಿದೆ. ವೃತ್ತಿಪರ ಹಾಡುಗಾರರಿಗೆ ಹಾಗೂ ಸಿನೆಮಾ ಹಾಡುಗಳಿಗೆ ಅವಕಾಶವಿರುವುದಿಲ್ಲ.
ಪ್ರಥಮ ಸುತ್ತಿನ ಸ್ಪರ್ಧೆಯಲ್ಲಿ ಆಯ್ಕೆಯಾದ 20ಮಂದಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವರು. ಸೆಮಿಫೈನಲ್‌ನಲ್ಲಿ ಆಯ್ಕೆಯಾದ 10ಮಂದಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಸೂಕ್ತ ತರಬೇತಿಯೊಂದಿಗೆ ಲೈವ್ ಸಂಗೀತ ವಾದ್ಯಗಳೊಂದಿಗೆ ಹಾಡಬೇಕು. ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ 10 ಸಾವಿರ ರೂ.ನಗದು, ಟ್ರೋಫಿ ಸಹಿತ ಅತ್ಯುತ್ತಮ ಗಾಯಕ ಪ್ರಥಮ ಪ್ರಶಸ್ತಿ ಹಾಗೂ ರನ್ನರ್ ಅಪ್‌ಗೆ 5 ಸಾವಿರ ರೂ. ನಗದು, ಟ್ರೋಫಿ ಸಮೇತ ಅತ್ಯುತ್ತಮ ಗಾಯಕ ದ್ವಿತೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸ್ಪರ್ಧೆಗೆ ಹೆಸರು ನೊಂದಾಯಿಸಲು ಜು.5 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ಮೊಬೈಲ್: 9964019229, 9964107067, 9483802494ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.