ಅಂಬೇಡ್ಕರ್ ನಿವಾಸ ಯೋಜನೆಗೆ ಅರ್ಜಿ ಆಹ್ವಾನ
Update: 2018-06-27 22:50 IST
ಉಡುಪಿ, ಜೂ.27: 2017-18ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮನೆ ನಿರ್ಮಿಸಲು ಸ್ವಂತ ನಿವೇಶನ ಹೊಂದಿರುವ ಮಹಿಳೆ (ಒಂದು ವೇಳೆ ಗಂಡನ ಹೆಸರಿನಲ್ಲಿ ನಿವೇಶನ ಇದ್ದರೆ ಗಂಡನ ಒಪ್ಪಿಗೆ ಪತ್ರದ ಮೂಲಕ ಮಹಿಳೆಗೆ), ವಿಧುರ, ಅಂಗವಿಕಲ ಹಾಗೂ ಹಿರಿಯ ನಾಗರೀಕ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಆದ್ದರಿಂದ ಅರ್ಹ ಫಲಾನುಭವಿಗಳು ಇತ್ತೀಚಿನ ಸೂಕ್ತ ದಾಖಲಾತಿ ಗಳೊಂದಿಗೆ ವಸತಿ ಸೌಲ್ಯ ಪಡೆಯಲು ನಗರಸಬಾ ಕಛೇರಿಗೆ ಅರ್ಜಿ ಸಲ್ಲಿಸು ವಂತೆ ಉಡುಪಿ ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.