×
Ad

ಮೆದುಳು ಸಂಬಂಧಿ ಕಾಯಿಲೆ: ಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ

Update: 2018-06-27 23:15 IST

ಮೂಡುಬಿದಿರೆ, ಜೂ. 27: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಕಡಾರಿ ನಿವಾಸಿ ಸುದರ್ಶನ ಆಚಾರ್ಯ (37)  ಕಳೆದ ಒಂದು ವಾರದಿಂದ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ಯಾಚಿಸುತ್ತಿದ್ದಾರೆ.

ಕೂಲಿ ಕೆಲಸ ಮಾಡುತಿದ್ದ ಅವರಿಗೆ ಒಂದು ವಾರದ ಹಿಂದೆ ದಿಢೀರನೆ ಮೆದುಳಿನ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಬ್ರೈನ್ ಆ್ಯಂಡ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯರ ಸಲಹೆ ಪ್ರಕಾರ 3.50 ಲಕ್ಷ ರೂ. ಚಿಕಿತ್ಸಾ ವೆಚ್ಚ ಬೇಕಾಗಿದೆ. ಆದರೆ ಕೂಲಿ ಕಾರ್ಮಿಕನಾಗಿ ದುಡಿಯುವ ಆ ಕುಟುಂಬದಿಂದ ಅಷ್ಟೊಂದು ಹಣ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ವಿವಾಹಿತರಾಗಿರುವ ಅವರಿಗೆ ಪುಟ್ಟ ಮಗುವೊಂದಿದೆ.

ಕಾಯಿಲೆಯಿಂದ ಚೇತರಿಕೆ ಕಾಣುತ್ತಿರುವ ಸುದರ್ಶನ ಆಚಾರ್ಯ ಅವರಿಗೆ ನೆರವು ಬೇಕಾಗಿದೆ. ಸುದರ್ಶನ ಆಚಾರ್ಯರ ಪತ್ನಿ ವಿಶಾಲಾಕ್ಷಿ ಅವರ ಬೆಳುವಾಯಿ ಕೆನರಾ ಬ್ಯಾಂಕ್‌ನ ಖಾತೆ ನಂ. 0645101056266, ಐಎಫ್‌ಸಿ ಕೋಡ್ ಸಿಎನ್‌ಆರ್‌ಬಿ 0000645 - ಎಂಐಸಿಆರ್ ಕೋಡ್ 575015043

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News