ಪಾಕ್: ಎನ್‌ಎಸ್‌ಎ ಜಂಜುವ ರಾಜೀನಾಮೆ

Update: 2018-06-27 18:07 GMT

ಇಸ್ಲಾಮಾಬಾದ್, ಜೂ. 27: ಉಸ್ತುವಾರಿ ಪ್ರಧಾನಿ ನಾಸಿರುಲ್ ಮುಲ್ಕ್ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ, ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಲೆಫ್ಟಿನೆಂಟ್ ಜನರಲ್ (ನಿವೃತ್ತ) ನಾಸಿರ್ ಜಂಜುವ ಬುಧವಾರ ರಾಜೀನಾಮೆ ನೀಡಿದ್ದಾರೆ.

ಸದರ್ನ್ ಕಮಾಂಡ್‌ನ ಮಾಜಿ ಮುಖ್ಯಸ್ಥ ಜಂಜುವರನ್ನು ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಆಡಳಿತಾವಧಿಯಲ್ಲಿ 2015 ಅಕ್ಟೋಬರ್‌ನಲ್ಲಿ ಈ ಹುದ್ದೆಗೆ ನೇಮಿಸಲಾಗಿತ್ತು.

ಅವರ ರಾಜೀನಾಮೆಯನ್ನು ಮಾಜಿ ಮುಖ್ಯ ನ್ಯಾಯಾಧೀಶ ಹಾಗೂ ಹಾಲಿ ಪ್ರಧಾನಿ ಮುಲ್ಕ್ ಅಂಗೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News