×
Ad

ಗುರುಪುರ ಸೇತುವೆ ತುರ್ತು ನಿರ್ವಹಣೆ ಕಾಮಗಾರಿ: ಪರಿಶೀಲನೆ

Update: 2018-06-28 09:05 IST

ಮಂಗಳೂರು, ಜೂ.28: ಸಮೀಪದ ಗುರುಪುರ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜೂ. 28 (ಇಂದು) ಬೆಳಗ್ಗೆಯಿಂದ ಪರಿಶೀಲನೆ ನಡೆಸುತಿದ್ದಾರೆ. ಈ ವೇಳೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬೆಳಗ್ಗೆ 6 ಗಂಟೆಯಿಂದ ಸುಮಾರು 3 ರಿಂದ 5 ತಾಸು ವಾಮಂಜೂರು- ಪಚ್ಚನಾಡಿ-ಬೋಂದೆಲ್-ಕಾವೂರು-ಬಜ್ಪೆ- ಕೈಕಂಬ ಮಾರ್ಗದಲ್ಲಿ ಸಂಚರಿಸಬಹುದು.

ಕೈಕಂಬದಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News