×
Ad

ಧಾರ್ಮಿಕ ಶಿಕ್ಷಣ ಓರ್ವ ಉತ್ತಮ ಮನುಷ್ಯನ್ನಾಗಿ ಪರಿವರ್ತಿಸುತ್ತದೆ: ಕೂರತ್ ತಂಙಳ್

Update: 2018-06-28 18:09 IST

ಉಳ್ಳಾಲ, ಜೂ. 28: ಧಾರ್ಮಿಕ ಶಿಕ್ಷಣ ಓರ್ವ ಉತ್ತಮ ಮನುಷ್ಯನ್ನಾಗಿ ಪರಿವರ್ತಿಸುತ್ತದೆ. ಧಾರ್ಮಿಕ ವಿದ್ಯಾಭ್ಯಾಸ ಪಡೆಯುವುದು ಸಮಾಜದ ಎಲ್ಲಾ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ಅಲ್-ಬುಖಾರಿ ಕೂರತ್ ತಂಙಳ್ ಹೇಳಿದರು.

ಅವರು ಉಳ್ಳಾಲ ಹಳೆಕೋಟೆಯಲ್ಲಿ  2ನೇ ವರ್ಷಕ್ಕೆ ಪಾದಾರ್ಪಣೆಗೈದ ತಾಜುಲ್ ಉಲಮಾ ಮದ್ರಸ ಪಾರಂಭೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಧಾರ್ಮಿಕ ವಿದ್ಯೆಗೆ ಮಹತ್ವ ಕಡಿಮೆಯಾಗುತ್ತಿದ್ದು ಪೋಷಕರು ಲೌಕಿಕ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವವನ್ನು ಧಾರ್ಮಿಕ ವಿದ್ಯೆಗೂ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷ ಯು.ಎಚ್ ಯುಸೂಫ್, ಕಾರ್ಯದರ್ಶಿ ಅಬೂಬಕರ್, ಉಪಾಧ್ಯಕ್ಷ ಅಬುಸಾಲಿ, ಕೋಶಾಧಿಕಾರಿ ರಫೀಕ್, ಸಂಚಾಲಕ ಅಬ್ದುಲ್ ಸತ್ತಾರ್, ಅಬ್ಬಾಸ್ ಕೊಟೆಪುರ, ಜಮಾಲ್ ಮುಸ್ಲಿಯಾರ್, ರಫೀಕ್ ಮದನಿ, ಹಮೀದ್ ಮುಸ್ಲಿಯಾರ್, ಸಲೀಂ ಸಅದಿ ಹೊನ್ನಾವರ, ಇಸ್ಮಾಯಿಲ್ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News