×
Ad

ಕಟೀಲಿನ ನಂದಿನಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ

Update: 2018-06-28 18:37 IST

ಮಂಗಳೂರು, ಜೂ.28: ದ.ಕ. ಜಿಲ್ಲೆಯಲ್ಲಿ ಗುರುವಾರವೂ ಧಾರಾಕಾರ ಮಳೆ ಸುರಿದಿದೆ. ಸಮೀಪದ ಕಟೀಲಿನಲ್ಲಿ ಮಳೆಯ ಪ್ರಭಾವದಿಂದ ನಂದಿನಿ ನದಿಯು ಭಾರೀ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ. ನದಿಯಲ್ಲಿದ್ದ ‘ರಜ’ ಕಲ್ಲು ಮುಳುಗಿ ಹೋಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಕಳೆದ 4-5 ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕಟೀಲಿನ ನಂದಿನಿ ನದಿಯಲ್ಲಿದ್ದ ‘ರಜ’ ಕಲ್ಲು ಮುಳುಗಿ ಹೋಗಿ, ಅದಕ್ಕಿಂತಲೂ ಎತ್ತರದಲ್ಲಿ ನೀರು ಹರಿದಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News