ಜೋಕಟ್ಟೆ: ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ
ಮಂಗಳೂರು, ಜೂ. 28: ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಂನ ಅಧೀನದಲ್ಲಿ ಅಂಜುಮಾನ್ ಮಹಿಳಾ ಶರೀಅತ್ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮವು ಬುಧವಾರ ಜೋಕಟ್ಟೆಯ ಅಂಜುಮಾನ್ ಯತೀಂ ಮತ್ತು ಮಸಾಕಿನ್ ಕೇಂದ್ರದಲ್ಲಿ ಜರುಗಿತು.
ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಲ್ ಪಾಠ ಹೇಳುವ ಮೂಲಕ ಉದ್ಘಾಟಿಸಿದರು. ಕುಂಬ್ರದ ಮರ್ಕಝಲ್ ಹುದಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜ್ ಯು.ಕೆ.ಮುಹಮ್ಮದ್ ಸಅದಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಹಾಜಿ ಮುಹಮ್ಮದ್ ಸಿರಾಜ್ ಮನೆಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹಾಜಿ ಯು.ಕೆ.ಕಣಚೂರು ಮೋನು, ಇಬ್ರಾಹೀಂ ಶರೀಫ್, ಹಾಜಿ ಎಂ. ಅಬ್ದುಲ್ ರಶೀದ್, ಹಾಜಿ ಜೆ.ಮುಹಮ್ಮದ್, ಮುಹಮ್ಮದ್ ಜತ್ತಬೆಟ್ಟು, ಬಿ.ಎಸ್.ಬಶೀರ್ ಅಹ್ಮದ್ ಭಾಗವಹಿಸಿದ್ದರು.
ಈ ಸಂದರ್ಭ ಹಾಜಿ ಇ.ಎಂ ಅಬ್ದುರ್ರಹ್ಮಾನ್ ದಾರಿಮಿ, ಉಸ್ಮಾನ್ ಮುಸ್ಲಿಯಾರ್ ಮಂಜೇಶ್ವರ, ಅಬ್ದುಲ್ಲಾ ನಈಮಿ, ಹಾಜಿ ಟಿ.ಎ.ಮುಹಮ್ಮದ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು. ಹಾಜಿ ಬಿ.ಎಸ್.ಹುಸೈನ್ ಸ್ವಾಗತಿಸಿದರು. ಹಾಜಿ ಎಂ. ಮೂಸಬ್ಬ ಕಾರ್ಯಕ್ರಮ ನಿರೂಪಿಸಿದರು.