ಇರಾನ್: ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ: 6 ಮಂದಿಗೆ ಗಾಯ

Update: 2018-06-28 15:56 GMT

ಲಂಡನ್, ಜೂ. 28: ಇರಾನ್‌ನ ನೈರುತ್ಯ ಭಾಗದಲ್ಲಿರುವ ತೈಲ ಶುದ್ಧೀಕರಣ ಘಟಕವೊಂದಕ್ಕೆ ಬುಧವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ‘ತಸ್ನಿಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಳಿಕ, ಅಬದನ್ ತೈಲ ಶುದ್ಧೀಕರಣ ಘಟಕದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಣಕ್ಕೆ ತಂದರು ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

ಬೆಂಕಿ ಅಪಘಾತದಿಂದಾಗಿ ತೈಲ ಸ್ಥಾವರಕ್ಕೆ ಆಗಿರುವ ಹಾನಿಯು ಇರಾನ್‌ನ ಕಚ್ಚಾತೈಲ ರಫ್ತಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅದು ಹೇಳಿದೆ. ಯಾಕೆಂದರೆ, ಈ ಸ್ಥಾವರದಲ್ಲಿ ಗ್ಯಾಸೊಲಿನ್ ಮತ್ತು ಇತರ ಕೆಲವು ಇಂಧನಗಳ ಉತ್ಪಾದನೆಯಾಗುತ್ತಿತ್ತು. ಅಲ್ಲಿ ಕಚ್ಚಾತೈಲ ಉತ್ಪಾದನೆಯಾಗುತ್ತಿರಲಿಲ್ಲ.

ಇರಾನ್ ಜಗತ್ತಿನ 5ನೇ ಅತಿ ದೊಡ್ಡ ತೈಲ ರಫ್ತು ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News