ಮಂಗಳೂರು; ಮೀನುಗಾರರಿಗೆ ಎಚ್ಚರಿಕೆ
Update: 2018-06-28 21:32 IST
ಮಂಗಳೂರು, ಜೂ.28: ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಜೂ.29ರ ಪೂರ್ವಾಹ್ನ 11:30ಗಂಟೆಯವರೆಗೆ ಅಲೆಗಳ ಅಬ್ಬರ ತೀವ್ರ ರೂಪ ತಾಳಲಿದೆ (ಸುಮಾರು 10 ರಿಂದ 12 ಅಡಿಗಳ ಎತ್ತರ) ಆದ್ದರಿಂದ ಸಮುದ್ರಕ್ಕೆ ಪ್ರವೇಶಿಸುವಾಗ ಮೀನುಗಾರರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.