ಉಗ್ರ ಆರ್ಥಿಕತೆ ಹತ್ತಿಕ್ಕಲು ನಿರ್ಧಾರ: ಪಾಕ್

Update: 2018-06-28 16:09 GMT

ಇಸ್ಲಾಮಾಬಾದ್, ಜೂ. 28: ಭಯೋತ್ಪಾದಕರ ಹಣಕಾಸು ಮೂಲವನ್ನು ಕಡಿದುಹಾಕುವ ಉದ್ದೇಶದ 26 ಅಂಶಗಳ ಕ್ರಿಯಾ ಯೋಜನೆಯೊಂದನ್ನು 15 ತಿಂಗಳ ಅವಧಿಯಲ್ಲಿ ಜಾರಿಗೊಳಿಸಲು ಪಾಕಿಸ್ತಾನ ನಿರ್ಧರಿಸಿದೆ.

ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನವನ್ನು ನಿಗಾಪಟ್ಟಿಯಲ್ಲಿ ಇರಿಸಲು ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)’ ಕಳೆದ ವರ್ಷ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

ಪಾಕಿಸ್ತಾನವು ತನ್ನ ಕ್ರಿಯಾ ಯೋಜನೆಯನ್ನು ಬುಧವಾರ ಪ್ಯಾರಿಸ್‌ನಲ್ಲಿ ಆರಂಭಗೊಂಡ ಎಫ್‌ಎಟಿಎಫ್ ಪೂರ್ಣ ಸಭೆಗೆ ಸಲ್ಲಿಸಿದೆ.

ಈ ಕ್ರಿಯಾಯೋಜನೆ ಪ್ರಕಾರ, ಲಷ್ಕರೆ ತಯ್ಯಬ, ಜಮಾಅತುದಅವಾ, ಫಲಾಹೆ ಇನ್ಸಾನಿಯತ್ ಫೌಂಡೇಶನ್, ಜೈಶೆ ಮುಹಮ್ಮದ್, ಇಸ್ಲಾಮಿಕ್ ಸ್ಟೇಟ್, ಅಲ್-ಖಾಯಿದ, ಹಕ್ಕಾನಿ ನೆಟ್‌ವರ್ಕ್ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳ ಆರ್ಥಿಕತೆಯನ್ನು ಹತ್ತಿಕ್ಕುವ ಅಂತಾರಾಷ್ಟ್ರೀಯ ಸಮುದಾಯದ ಕ್ರಮಗಳಿಗೆ ಪಾಕಿಸ್ತಾನ ಕೈಜೋಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News