×
Ad

​ದೇರಳಕಟ್ಟೆ: ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

Update: 2018-06-29 15:03 IST

ಮಂಗಳೂರು, ಜೂ. 29: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳೆಯರಿಗಾಗಿ ಒಂದು ವರ್ಷದ ವಿಶೇಷ ಕೋರ್ಸ್ ಒಳಗೊಂಡ ಮಹಿಳಾ ಶರೀಅತ್ ಕಾಲೇಜ್‌ಗೆ ಗುರುವಾರ ಚಾಲನೆ ನೀಡಲಾಯಿತು.

ಟ್ರಸ್ಟ್ ಅಧ್ಯಕ್ಷ ಏಷ್ಯನ್ ಅಹ್ಮದ್ ಬಾವಾ ಹಾಜಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೈಯದ್ ಇಸ್ಮಾಯೀಲ್ ಅಲ್ ಅಹ್‌ದಲ್ ತಂಙಳ್ ಆದೂರು ಉದ್ಘಾಟಿಸಿದರು.

ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ವಿ.ಯು. ಇಸ್ಹಾಕ್ ಝುಹ್ರಿ ಸೂರಿಂಜೆ ವಿಷಯ ಮಂಡಿಸಿದರು. ಕಾಲೇಜ್‌ನ ಪ್ರೊಫೆಸರುಗಳಾದ ಅಬೂಬಕರ್ ಸಿದ್ದೀಖ್ ಅಹ್ಸನಿ ಹಾಗೂ ಆಯಿಶಾ ಫರ್ವೀನ್ ಕಾಲೇಜ್‌ನ ನೀತಿ, ನಿಯಮಗಳನ್ನು ವಿವರಿಸಿದರು.

ತಾಜುಲ್ ಉಲಮಾ ಮಸ್ಜಿದ್‌ನ ಇಮಾಮ್ ಅಶ್ರಫ್ ಸಅದಿ, ಟ್ರಸ್ಟ್ನ ಕೋಶಾಧಿಕಾರಿ ಹಾಜಿ ಬಶೀರ್ ಅಹ್ಮದ್ ದೇರಳಕಟ್ಟೆ, ಸದಸ್ಯರಾದ ಯೂಸುಫ್ ರಝ್ವಿ, ಹಾಜಿ ಅಹ್ಮದ್ ಕಬೀರ್, ಹಮೀದ್ ಹಾಜಿ ದೇರಳಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News